- ಸಂಸ್ಥೆಯ ವಿವರಗಳು
- ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಅಧಿಕಾರ ಮತ್ತು ಕರ್ತವ್ಯಗಳು
- ನಿರ್ಣಯ ತೆಗೆದುಕೊಳ್ಳವ ಪ್ರಕ್ರಿಯೆಯಲ್ಲಿ ಅನುಸರಿಸಲಾದ ವಿಧಿ ವಿಧಾನಗಳು
- ಕರ್ತವ್ಯ ಪಾಲನೆಗಾಗಿ ಅಳತೆಗೋಲು
- ಕರ್ತವ್ಯ ಪಾಲನೆಗೆ ಅನುಸರಿಸಿದ ನಿಯಮ, ಭೋದನೆ, ಕೈಪಿಡಿ ಹಾಗೂ ದಾಖಲೆಗಳು.
- ತನ್ನ ನಿಬಂಧದಲ್ಲಿ ಇರಿಸಲು ಹಿಡಿದಿರುವಂತ ದಾಖಲೆ ವರ್ಗಗಳ ವರದಿ.
- ರಚನಾತ್ಮಕ ನಿಯಮಗಳ ಜಾರಿಗೆ ಸಂಬಂಧಪಟ್ಟ ಸಾರ್ವಜನಿಕ ಸದಸ್ಯ ಪ್ರತಿನಿಧಿನಿಂದ ಅಥವಾ ಪರ್ಯಾಯಲೋಚನೆಗೆ ಇರುವ ವ್ಯವಸ್ಥೆಯ ವಿವರ
- ಮಂಡಳಿ, ಸಭೆ, ಪರಿಷತ್ತು ಅಥವಾ ಬೇರೆ ಸಮಿತಿಗಳ ವರದ.
- ಅಧಿಕಾರಿ ಹಾಗೂ ನೌಕರರ ನಾಮಸ್ಥಾನ ನಿರ್ದೇಶಕ ಪುಸ್ತಕ
- ನಿಯಮಾನುಸಾರ, ಪರಿಹಾರವನ್ನೊಳಗೊಂಡು ಪ್ರತಿ ಅಧಿಕಾರಿ ಹಾಗೂ ನೌಕರರು ಪಡೆಯುತ್ತಿರುವ ತಿಂಗಳ ಸಂಭಾವನೆ.
- ಸಹಾಯಧನ ಕಾರ್ಯಕ್ರಮ ಅನುಷ್ಠಾನಗೊಂಡ ರೀತಿ.
- ರಿಯಾಯಿತಿ ಪಡೆದವರ ವಿವರ, ಮಿತಿ ಅಥವಾ ಧನಸಹಾಯದ ಅಧಿಕಾರತ್
- ಲೆಕ್ಟ್ರಾನಿಕ್ ರೀತಿಯಲ್ಲಿ ದೊರೆಯುವ ಮಾಹಿತಿ.
- ಮಾಹಿತಿ ಪಡೆಯಲು ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳ ವಿವರ.
- ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಪಟ್ಟಿ.
ಮಾಹಿತಿ ಹಕ್ಕಿನ ಅಧಿಕಾರ ತಿಳಿಯಿರಿ
ಮಾಹಿತಿ ಹಕ್ಕು 2005, ಸಾರ್ವಜನಿಕ ಅಧಿಕಾರ ನಿಯಂತ್ರಣದಡಿಯಲ್ಲಿ ಬರುವ ಸಾರ್ವಜನಿಕರಿಗೆ ಮಾಹಿತಿ ಪಡೆಯಲು ಪ್ರಯೋಗಾತ್ಮಕ ಚೌಕಟ್ಟನ್ನು ಸಿದ್ದಪಡಿಸಿದೆ. ಇದರಿಂದ ಎಲ್ಲಾ ಸಾರ್ವಜನಿಕರ ಪ್ರಾಧಿಕಾರಗಳಲ್ಲಿ ಪಾರದರ್ಶತೆ ಹಾಗೂ ಪ್ರಮಾಣಿಕತೆ ಉತ್ತೇಜನಗೊಳ್ಳುತ್ತದೆ.
ಮಾಹಿತಿ ಹಕ್ಕು ಯಾವಾಗ ಜಾರಿಗೆ ಬಂತು?
ಕೇಂದ್ರ ಮಾಹಿತಿ ಹಕ್ಕು 12.10.2005ಕ್ಕೆ ಜಾರಿಗೆ ಬಂತು. ಆದರೆ ಅದಕ್ಕಿಂತ ಮುಂಚಿತವಾಗಿ 9ರಾಜ್ಯ ಸರ್ಕಾರಗಳು ಈ ಕಾಯಿದೆಯನ್ನು ರಾಜ್ಯದಲ್ಲಿ ಬಿಡುಗಡೆ ಮಾಡಿದವು. ಆ ರಾಜ್ಯಗಳು ಜಮ್ಮು, ಕಾಶ್ಮೀರ, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ,ಕರ್ನಾಟಕ, ತಮಿಳುನಾಡು, ಅಸ್ಸಾಂ ಮತ್ತು ಗೋವಾ.
ಈ ಹಕ್ಕು ನೀಡುವುದಕ್ಕೆ ನಮಗೆ ಕಾಯಿದೆ ಯಾಕೆ ಬೇಕು?
ಏಕೆಂದರೆ, ಯಾವುದಾದರೂ ಸರ್ಕಾರಿ ಇಲಾಖೆಗೆ ಹೋಗಿ, ಅಲ್ಲಿಯ ಅಧಿಕಾರಿಯನ್ನು ಮಾಹಿತಿ ಹಕ್ಕು ನನ್ನ ಮೂಲಭೂತ ಹಕ್ಕು. ನಾನು ಈ ದೇಶದ ಯಜಮಾನ, ದಯವಿಟ್ಟು ನನಗೆ ಎಲ್ಲಾ ಕಡತಗಳನ್ನು ತೋರಿಸಿ ಅವರು ನೀಡುತ್ತಿರಲಿಲ್ಲ ಜೊತೆಗೆ ನಿಮ್ಮನ್ನು ಕೊಠಡಿಯಿಂದ ಹೊರ ಹಾಕುವ ಎಲ್ಲಾ ಸಾಧ್ಯತೆಗಳು ಇರುತ್ತಿದ್ದವು. ಆದ್ದರಿಂದ ಯಾವುದಾದರೊಂದು ಪದ್ಧತಿ ಇಲ್ಲವೆ ನಿಯಮದ ಮೂಲಕ ಈ ಹಕ್ಕುನ್ನು ಬಳಸಬೇಕಾಯಿತು. 13.10.2005 ರಂದು ಜಾರಿಗೆ ಬಂತು. ಮಾಹಿತಿ ಹಕ್ಕು 2005 ನಮಗೆ ಯಾವ ಹೊಸ ಹಕ್ಕನ್ನು ನೀಡಿಲ್ಲ. ಮಾಹಿತಿಗಾಗಿ ಅರ್ಜಿ ಹೇಗೆ ಸಲ್ಲಿಸಬೇಕು, ಎಲ್ಲಿ ಸಲ್ಲಿಸಬೇಕು. ಎಷ್ಟು ಶುಲ್ಕ ಇತ್ಯಾದಿ ಪ್ರಕ್ರಿಯೆಗಳನ್ನು ತೋರಿಸಿದೆ.
ಮಾಹಿತಿ ಹಕ್ಕು 2005ರಲ್ಲಿ ಯಾವ ಯಾವ ಹಕ್ಕುಗಳು ದೊರೆಯುತ್ತವೆ?
- ಸರ್ಕಾರವನ್ನು ಯಾವ ಪ್ರಶ್ನೆಯನ್ನಾದರೂ ಕೇಳಬಹುದು ಅಥವಾ ಯಾವ ಮಾಹಿತಿಯನ್ನಾದರೂ ಪಡೆಯಬಹುದು.
- ಸರ್ಕಾರದ ಯಾವುದೇ ದಾಖಲೆಗಳ ಪ್ರತಿ ಪಡೆಯಬಹುದು.
- ಸರ್ಕಾರದ ಯಾವುದೇ ದಾಖಲೆಗಳನ್ನು ತಪಾಸಣೆ ಮಾಡಬಹುದು.
- ಸರ್ಕಾರದ ಯಾವುದೇ ಕೆಲಸಗಳನ್ನು ತಪಾಸಣೆ ಮಾಡಬಹುದು.
- ಯಾವುದೇಸರ್ಕಾರೀ ಕೆಲಸದ ವಸ್ತುಗಳ ಮಾದರಿ ಪಡೆಯಬಹುದು.
ಮಾಹಿತಿ ಹಕ್ಕು ಯಾರನ್ನೆಲ್ಲಾ ಪಸರಿಸಿದೆ.
ಜಮ್ಮು ಮತ್ತು ಕಾಶ್ಮೀರ ಹೊರತು ಪಡಿಸಿ, ಈ ಕಾಯಿದೆಯಾಡಿ ಭಾರತ ದೇಶವನ್ನು ಪಸರಿಸಿದೆ. ಸಂವಿಧಾನದಡಿಯಲ್ಲಿ ರಚಿಸಲ್ಪಟ್ಟಿರುವ ಯಾವುದೇ ಕಾಯಿದೆ ಅಥವಾ ಸರ್ಕಾರದ ಘೋಷಣೆಯಡಿಯಲ್ಲಿ ಬರುವ ಸರ್ಕಾರೇತರ ಸಂಸ್ಥೆಗಳು, ಸಕರ್ಾರದ ಹಿಡಿತದಲ್ಲಿರುವ ಅಥವಾ ಸರ್ಕಾರದಿಂದ ಸಹಾಯಧನ ಪಡೆಯುವ ಎಲ್ಲಾ ಸಂಸ್ಥೆಗಳ ಇದರೊಳನೊಳಗೊಂಡಿದೆ.
ಯಾರು ನಿಮಗೆ ಮಾಹಿತಿ ನೀಡುತ್ತಾರೆ?
ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಒಬ್ಬರು ಅಥವಾ ಹೆಚ್ಚು ಪ್ರಸ್ತುತ ಅಧಿಕಾರಿಗಳನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಎಂದು ನೇಮಿಸುತ್ತಾರೆ. ನಿಮ್ಮ ಅರ್ಜಿಯನ್ನು ಅವರಿಗೆ ಸಲ್ಲಿಸಬೇಕು. ಇಲಾಖೆಯ ಬೇರೆ ಬೇರೆ ವಿಭಾಗಗಳಿಂದ ಮಾಹಿತಿ ಸಂಗ್ರಹಿಸಿ ನಿಮಗೆ ನೀಡುವುದು ಅವರ ಕರ್ತವ್ಯ. ಇದರ ಜೊತೆಗೆ ಕೆಲವು ಅಧಿಕಾರಿಗಳನ್ನು ಸಹಾಯಕ ಮಾಹಿತಿ ಅಧಿಕಾರಿ ಎಂದು ನೇಮಿಸಲಾಗುವುದು. ಇವರು ನಿಮ್ಮಿಂದ ಅರ್ಜಿ ಪಡೆದು ಅದನ್ನು PIO ಗೆ ಒತ್ತಾಸೆಗೂಡುವುದು ಅವರ ಕರ್ತವ್ಯವಾಗಿರುತ್ತದೆ.
ನಿಮ್ಮ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ನೀವು ಇದನ್ನು PIO ಅಥವಾ APIO ಗಳಲ್ಲಿ ನೀಡಬಹುದು. ಕೇಂದ್ರ ಸರ್ಕಾರಿ ಇಲಾಖೆಗಳ ವಿಷಯಕ್ಕೆ ಬಂದರೆ, 629 ಅಂಚೆ ಕಛೇರಿಗಳನ್ನು APO ಎಂದು ಪರಿಗಣಿಸಲಾಗಿದೆ. ಇಂತಹ ಯಾವುದೇ ಅಂಚೆ ಕಛೇರಿಗಳನ್ನು ಎಂದು ಪರಿಗಣಿಸಲಾಗಿದೆ. ಇಂತಹ ಯಾವುದೇ ಕಛೇರಿಯಲ್ಲಿ ಮಾಹಿತಿ ಹಕ್ಕು ಕೌಂಟರ್ಗಳಲ್ಲಿ ಅರ್ಜಿ ಹಾಗೂ ಶುಲ್ಕ ಪಾವತಿಸಬಹುದು. ಅವರು ನಿಮಗೆ ರಸೀತಿ ಹಾಗೂ ಸ್ವೀಕೃತಿಯನ್ನು ನೀಡುತ್ತಾರೆ. ಮತ್ತು ಅದನ್ನು ಸೂಕ್ತವಾದ, ಸಂಬಂಧಪಟ್ಟ PIO ಗೆ ರವಾನಿಸುವುದು ಅವರ ಜವಾಬ್ದಾರಿ.
ನೀವು ಹೇಗೆ ಶುಲ್ಕ ಪಾವತಿಸಬೇಕು?
ಹೌದು, ಅರ್ಜಿ ಶುಲ್ಕವಿರುತ್ತದೆ. ಎಲ್ಲಾ ಕೇಂದ್ರ ಸರ್ಕಾರಿ ಇಲಾಖೆಗಳಿಗೆ ರೂ. 10/-. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ನಿಗದಿತ ಬೆಲೆ ಬೇರೆ ಇರುತ್ತದೆ. ಹೆಚ್ಚಿನ ವಿವರಗಳಿಗಾಗಿ ಇದರ ತಿಜಛಣಜ ನಲ್ಲಿ ರಾಜ್ಯ ಸಕರ್ಾರ ನೀಡಿರುವ ಚೌಕಟ್ಟು ನೋಡಬಹುದು. ಮಾಹಿತಿ ಪಡೆಯಲು, ಕೇಂದ್ರ ಸಕರ್ಾರಿ ಕಛೇರಿಯಿಂದ ದೊರೆತ ಮಾಹಿತಿ 1ಹಾಳೆಗೆ ರೂ. 2/- ಇರುತ್ತದೆ. ಬೇರೆ ರಾಜ್ಯಗಳಿಗೆ ನಿಗದಿತ ಬೆಲೆ ಬೇರೆ. ಅದೇ ರೀತಿ ದಾಖಲೆ ತಪಾಸಣೆಗೆ ಒಂದು ಗಂಟೆಗೆ ರೂ.5/- ನೀಡಬೇಕು. ಇದು ಕೇಂದ್ರ ಸರ್ಕಾರದ ಕಾನೂನು ಪ್ರಕಾರ ಬೇರೆ ಬೇರೆ ರಾಜ್ಯಗಳಿಗೆ ಆಯಾಯ ರಾಜ್ಯದ ಕಾನೂನು ನೋಡಿ ಶುಲ್ಕವನ್ನು ನಗದು ರೂಪದಲ್ಲಿ ಇಲ್ಲವೆ ಡಿ.ಡಿ. ಮುಖಾಂತರ ಚೆಕ್ ಮೂಲಕ ಇಲ್ಲವೆ ಪೋಸ್ಟಲ್ ಆರ್ಡರ್ ಮೂಲಕ ಸಾರ್ವಜನಿಕ ಪ್ರಾಧಿಕಾರದ ಪರವಾಗಿ ಪಡೆಯಬಹುದು. ಕೆಲವು ರಾಜ್ಯಗಳಲ್ಲಿ ನ್ಯಾಯಾಲಯದ ಸ್ಟಾಂಪ್ನ್ನು ಅರ್ಜಿಯೊಂದಿಗೆ ಲಗತ್ತಿಸಬಹುದು. ಇದು ನೀವು ಶುಲ್ಕ ನೀಡಿದ ರೀತಿಯೇ ಆಗುತ್ತದೆ. ನಂತರ ಅರ್ಜಿಯನ್ನು ಅಂಚೆ ಅಥವಾ ಕೈಯಿಂದ ಕೊಡಬಹುದು.
ಅಂಚೆ ಮೂಲಕ ಕಳುಹಿಸಬಹುದು. ವಿದ್ಯುಕ್ತವಾಗಿ ಪರಿಚ್ಛೇದ 18ರ ಅಡಿಯಲ್ಲಿ, ದೂರನ್ನು ಸಂಬಂಧಪಟ್ಟ ಮಾಹಿತಿ ಆಯುಕ್ತರಿಗೆ ಕಳುಹಿಸಬಹುದು. ನಿಮ್ಮ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಅಧಿಕಾರಿಗೆ 25,000/- ದಂಡ ಹಾಕುವ ಅಧಿಕಾರ ಮಾಹಿತಿ ಆಯುಕ್ತರಿಗೆ ಇರುತ್ತದೆ.
ಮಾಹಿತಿ ಪಡೆಯಲು ಯಾವುದಾದರೂ ಅರ್ಜಿ ನಮೂನೆ ಇದೆಯೇ ?
ಕೇಂದ್ರ ಸರ್ಕಾರ ಇಲಾಖೆಗಳಿಗೆ ಅರ್ಜಿ ನಮೂನೆ ಇರುವುದಿಲ್ಲ. ಮಾಮೂಲು ಅರ್ಜಿಯಂತೆ ಖಾಲಿ ಹಾಳೆಯಲ್ಲಿ ಬರೆದು ಸಲ್ಲಿಸಬೇಕು. ಆದರೆ, ಕೆಲವು ರಾಜ್ಯ, ಸಚಿವಾಲಯ ಹಾಗೂ ಇಲಾಖೆಗಳಲ್ಲಿ ನಿರ್ಧಿಷ್ಟ ನಮೂನೆ ಇರುತ್ತದೆ. ಅಂತಹ ನಮೂನೆಯಲ್ಲಿ ಸಲ್ಲಿಸಬೇಕು. ದಯವಿಟ್ಟು ಬೇರೆ ಬೇರೆ ರಾಜ್ಯಗಳ ನಿಯಮಗಳನ್ನು ತಿಳಿಯಿರಿ.
ಮಾಹಿತಿಗಾಗಿ ಅರ್ಜಿ ಹೇಗೆ ಸಲ್ಲಿಸಬೇಕು?
ಮಾಮೂಲಿ ಹಾಳೆಯಲ್ಲಿ ಅರ್ಜಿಯನ್ನು ಬರೆದು ಖುದ್ದಾಗಿ ಇಲ್ಲವೆ ಅಂಚೆ ಮೂಲಕ ಮಾಹಿತಿ ಅಧಿಕಾರಿಗೆ ಕಳುಹಿಸಿ ಒಂದು ಪ್ರತಿ ನಿಮ್ಮ ಉಲ್ಲೇಖಗಾಗಿ ನಿಮ್ಮೊಂದಿಗೆ ಇಟ್ಟುಕೊಳ್ಳಲು ಮರೆಯಬೇಡಿ.
ಅರ್ಜಿ ಶುಲ್ಕವನ್ನು ಹೇಗೆ ಪಾವತಿಸಬೇಕು?
ಅರ್ಜಿ ಶುಲ್ಕ ಪಾವತಿಸಲು, ಪ್ರತಿ ರಾಜ್ಯಕ್ಕೂ ಬೇರೆ ನಿಯಮವಿದೆ. ಸಾಮಾನ್ಯವಾಗಿ,ಅರ್ಜಿ ಶುಲ್ಕವನ್ನು ಕೆಳಗಿನ ಯಾವುದಾದರೊಂದು ರೂಪದಲ್ಲಿ ಪಾವತಿಸಬಹುದು.
- ಖುದ್ದಾಗಿ ನಗದು (ಜ್ಞಾಪಕವಾಗಿ ರಸೀತಿ ಪಡೆಯಿರಿ)
- ಅಂಚೆ ಮೂಲಕ
- ಡಿಮ್ಯಾಂಡ್ ಡ್ರಾಪ್ಟ್ (ಡಿ.ಡಿ.)
- ಇಂಡಿಯನ್ ಪೋಸ್ಟಲ್ ಅರ್ಡರ್ (ಐ.ಪಿ.ಓ)
- ಮನಿ ಅರ್ಡರ್ (ಎಂ.ಓ) (ಕೆಲವು ರಾಜ್ಯಗಳಲ್ಲಿ ಮಾತ್ರ)
- ನ್ಯಾಯಾಲಯ ಅಂಚೆ ಶುಲ್ಕ (ಕೆಲವು ರಾಜ್ಯಗಳಲ್ಲಿ ಮಾತ್ರ)
- ಬ್ಯಾಂಕ್ ಚೆಕ್