ಅಭಿಪ್ರಾಯ / ಸಲಹೆಗಳು

ನಿಮ್ಮನ್ನು ವೀಕ್ಷಿಸಲಾಗುತ್ತಿದೆ

ಅಪರಾಧ ಎಸಗುವವರನ್ನು ತನಿಖೆ ಮಾಡಲು ಪರೀಕ್ಷಿಸಲು ಕ್ಯಾಮಾರ ಮತ್ತು ಬ್ಲಾಕ್ಬೇರಿಗಳು.

 

ರಸ್ತೆಗಳಲ್ಲಿ ನಾಗರೀಕರಿಂದ ಉಂಟಾಗುವ ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗಟ್ಟಲು ಮೈಸೂರು ಸಂಚಾರಿ ಪೊಲೀಸರನ್ನು ತಾಂತ್ರಿಕ ಸೌಲಭ್ಯಗಳಿಂದ ಸಜ್ಜುಗೊಳಿಸಲಾಗಿದೆ.  ಇದರಿಂದ ನಿಯಮ ಉಲ್ಲಂಘನೆ ಮಾಡಿ ತಪ್ಪಸಿಕೊಳ್ಳಲು ಸಾಧ್ಯವಿಲ್ಲ.  ಅದರಲ್ಲಿಯೂ ಹೆಚ್ಚು ವೇಗ, ಕೆಂಪು ದೀಪದ ಎಗರುವಿಕೆ, ಮದ್ಯದ ಅಮಲಿನಲ್ಲಿ ಚಾಲನೆ, ವಿಧಿಸಿದ ದಂಡ ಪಾವತಿ ಮಾಡದಿರುವುದು, ವಾಹನ ಮಾಲೀಕತ್ವದ ನೊಂದಾಣಿ ವರ್ಗಾವಣೆ ಮಾಡದಿರುವಿಕೆ.

ಮೈಸೂರು ಸಂಚಾರಿ ಪೊಲೀಸರು ಸ್ವಯಕಾರ್ಯನಿರತ ಜಾರಿ ಕೇಂದ್ರವನ್ನು ಸ್ಥಾಪಿಸಿದ್ದಾರೆ.  ಈ ಕೇಂದ್ರವು ಎಲ್ಲಾ ವಾಹನಗಳ ಹಾಗು ಅದನ್ನು ಬಳಸುವವರ ದಾಖಲಾತಿಗಳನ್ನು ಹೊಂದಿದೆ.  ಇದರಡಿಯಲ್ಲಿ ವಿವಿಧ ಸಂಚಾರಿ ಸೂಚಕ ಸ್ಥಳಗಳಲ್ಲಿ 80ಕ್ಕೂ ಹೆಚ್ಚು ಕ್ಯಾಮಾರಗಳನ್ನು ಅಳವಡಿಸಲಾಗಿದೆ  ಹಾಗೂ ಸಂಚಾರಿ ನಿರೀಕ್ಷಕರುಗಳಿಗೆ ಬ್ಲಾಕ್ ಬೇರಿಗಳನ್ನು ನೀಡಲಾಗಿದ್ದು, ಅದರ ಒಂದು ಗುಂಡಿ ಹೊತ್ತಿದ್ದಲ್ಲಿ ವಾಹನದ ಹಾಗೂ ಚಾಲಕನ ವಿವರಗಳನ್ನು ಒದಗಿಸಲು ಸಹಕರಿಸುವುದು.

ಈಗ ಸಂಚಾರಿ ಪೊಲೀಸರಿಗೆ 6 ಸಂಚಾರಿ ನಿಯಂತ್ರಕಗಳನ್ನು ಒದಗಿಸಲಾಗಿದೆ.

ನಿಮ್ಮ ಸ್ವರಕ್ಷಣೆಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ, ಇಲ್ಲದಿದ್ದರೆ ಏನಾಗಬಹುದು

(1) ಕೆಂಪು ದೀಪವಿರುವಾಗ ನಿಲ್ಲಿಸದಿದ್ದರೆ,

 1.    ಐದು ಸಂಚಾರಿ ಸೂಚಕ ದೀಪಗಳು ಇರುವಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಅವು ನೇರವಾಗಿ ತರಂಗಗಳನ್ನು ಸ್ವಯಂ ಕಾರ್ಯನಿರತ ಜಾರಿ ಕೇಂದ್ರಕ್ಕೆ ಕಳುಹಿಸುತ್ತದೆ.
  2.    ಪ್ರತಿಸಲ ವಾಹನವು ಕೆಂಪು ದೀಪವನ್ನು ದಾಟಿದಲ್ಲಿ ಆ ವಾಹನದ ಛಾಯಚಿತ್ರವನ್ನು ಇಲಾಖೆಗೆ ರವಾನಿಸಲಾಗುವುದು.
  3.    ಇದು ವಾಹನದ ಸಂಖ್ಯೆಯನ್ನು ಮತ್ತು ನಿಯಮ ಉಲ್ಲಂಘನೆ ಮಾಡಿರುವ ಪುರಾವೆಯನ್ನು ಇಲಾಖೆಗೆ ಒದಗಿಸುತ್ತದೆ.
  4.    ಇದು ಒಂದರ ಆಧಾರದ ಮೇಲೆಯೇ ನೋಟೀಸನ್ನು ಜಾರಿ ಮಾಡಲಾಗುವುದು. ಕೇಂದ್ರದಲ್ಲಿ ಪ್ರತಿಯೊಂದು ಅಪರಾಧವು ದಾಖಲಾಗುವುದು ಮತ್ತು ಮತ್ತೆ ಮತ್ತೆ/ಪುನ:  ಪುನ: ಅಪರಾಧ ಎಸಗುವವರು ಹೆಚ್ಚಿನ ದಂಡವನ್ನು ತೆರಬೇಕಾಗುತ್ತದೆ. ಮತ್ತು ಅವರ ರಹದಾರಿಗಳನ್ನು ರದ್ದುಗೊಳಿಸಲಾಗುವುದು.
  ಇದರ ಜೊತೆಗೆ ಸಂಚಾರಿ ನಿಯಮಗಳ ಉಲ್ಲಂಘನೆ ಮಾಡುವುದನ್ನು ವೀಕ್ಷಿಸಲು 80 ವೀಕ್ಷಣಾ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

(2) ನೀವು ಕುಡಿದ ಅಮಲಿನಲ್ಲಿ ವಾಹನ ಚಾಲನೆ ಅಥವಾ ವೇಗ.

ಮೈಸೂರು ಸಂಚಾರಿ ಪೊಲೀಸರುಕುಡಿದ ಅಮಲಿನಲ್ಲಿ ಚಾಲನೆ ಮಾಡುವವರ ಮೇಲೆ ತಮ್ಮ ದಾಳಿಯನ್ನು ಚುರುಕುಗೊಳಿಸಿದ್ದಾರೆ.  ನೀವು ಕುಡಿದ ಅಮಲಿನಲ್ಲಿ ಚಾಲನೆ ಮಾಡಿರುವುದು ಸಾಬೀತಾದಲ್ಲಿ ನಿಮ್ಮ ವಾಹನವನ್ನು ವಶಪಡಿಸಿಕೊಳ್ಳಲಾಗುವುದು ಹಾಗೂ ನೀವು ಪ್ರತ್ಯಕ್ಷವಾಗಿ ನ್ಯಾಯಾಲಯಕ್ಕೆ ಬಂದು ದಂಡ ಕಟ್ಟಬೇಕು.  ಇದು ಮಾತ್ರವಲ್ಲದೆ ನಿಮ್ಮ ಅಪರಾಧ ಸ್ವಯಂ ಕಾರ್ಯನಿರತ ಜಾರಿಕೇಂದ್ರದಲ್ಲಿ ದಾಖಲಾಗಿ ಯಾವುದೇ ಸಮಯದಲ್ಲಿ ನಿರೀಕ್ಷಕರು ವಿವರಗಳನ್ನು ಪಡೆಯಹುದು.  ಕುಡಿದ ಅಮಲಿನಲ್ಲಿ ವಾಹನ ಚಾಲನೆ ಮಾಡುವುದು ಮಹಾ ಅಪರಾಧವಲ್ಲದೆ, ಚಾಲಕನನ್ನು  ಬಂಧನಕ್ಕೆ ಒಳಪಡಿಸಲಾಗುವುದು ಎಂಬುದು ನೆನಪಿನಲ್ಲಿರಲಿ.  ನಿಗದಿತ ವೇಗದ ಮಿತಿಗಿಂತ ಅತಿಯಾದ ವೇಗದಲ್ಲಿ ವಾಹನ ಚಾಲನೆ ಮಾಡಿದವರಿಗೂ ಇದೇ ನಿಯಮ.  ಪುನ: ಪುನ: ಅಪರಾಧ ಎಸಗುವವರು ಹೆಚ್ಚಿನ ದಂಡವನ್ನು ತೆರವುದಲ್ಲದೆ ಅವರ ರಹದಾರಿ ಪತ್ರವನ್ನು ರದ್ದು ಪಡಿಸಲಾಗುವುದು.

(3) ನೀವು ದಂಡ ಪಾವತಿಸದಿದ್ದರೆ.

ನೀವು ಎಸಗಿದ ಅಪರಾಧ ಮತ್ತು ವಿಧಿಸಿದ ದಂಡ ಸ್ವಯಂ ಕಾರ್ಯನಿರತ ಜಾರಿಕೇಂದ್ರದಲ್ಲಿ ದಾಖಲಾಗಿರುತ್ತದೆ.  ನಿಮಗೆ ನೀಡಿದ ಸಮಯದಲ್ಲಿ ದಂಡ ಪಾವತಿಸದಿದ್ದಲ್ಲಿ ಅಧಿಕಾರಿಗಳಿಗೆ ನೀಡಿರುವ ಬ್ಲಾಕ್ಬೇರಿಯಲ್ಲಿ ಎಚ್ಚರಿಕೆಯ ಸೂಚನೆ ನೀಡಲಾಗುವುದು.  ಹಾಗೂ ಅವರು ನಿಮ್ಮ ವಾಹನವನ್ನು ನಿಮ್ಮ ಆವರಣದಿಂದಾಗಲೀ ರಸ್ತೆಯಿಂದಾಗಲೀ ಮುಟ್ಟುಗೋಲು ಹಾಕಿಕೊಳ್ಳಬಹುದು.

(4)  ನಿಮ್ಮ ವಾಹನದ ಮಾಲೀಕತ್ವದ ವರ್ಗಾವಣೆ ಮಾಡಿದಿದ್ದರೆ.

ನಿಮ್ಮ ವಾಹವನ್ನು ಮಾರಿದ್ದಲ್ಲಾಗಲೀ, ಕೊಂಡಿದ್ದಲ್ಲಾಗಲೀ ಮಾಲೀಕತ್ವದ ವರ್ಗಾವಣೆ ಮಾಡದಿರುವುದು ಕಾನೂನು ಬಾಹಿರ.  ನೀವು ಮಾರಾಟ ಮಾಡಿದ ವಾಹನವು ಯಾವುದಾದರು ಅಪರಾಧ, ಅಪಘಾತ ಅಥವಾ ಉಗ್ರಗಾಮಿ ಚಟುವಟಿಕೆಗಳಲ್ಲಿ ಒಳಗಾಗಿದ್ದರೆ ನೀವು ಒಬ್ಬ ಆರೋಪಿ ಆಗಬಹುದು.  

ನೀವು 45 ದಿನಗಳ ಒಳಗಾಗಿ ಮಾಲೀಕತ್ವ ವರ್ಗಾವಣೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಸರಿಯಾದ ದಾಖಲಾತಿಗಳನ್ನು ಪಡೆಯಬಹದು. ವರ್ಗಾವಣೆ ಮಾಡಿಸುವುದು, ಕೊಂಡುಕೊಳ್ಳುವವನ ಹಾಗೂ ಮಾರುವವನ ಇಬ್ಬರ ಜವಾಬ್ದಾರಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 19-10-2020 03:49 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080