ಅಭಿಪ್ರಾಯ / ಸಲಹೆಗಳು

ಸಂಚಾರಿ ಸೂಚಕಗಳು

ನಿಲ್ಲಿಸಿ:

ನಿಲುಗಡೆ ರೇಖೆಗಿಂತ ಮೊದಲೇ ನಿಲ್ಲಿಸಿ ಹಾಗೂ ರೇಖಾ ಬೇದನೆಯಲ್ಲಿ ಸಂದಣಿಗೊಳಿಸಬೇಡಿ, ಇದರಿಂದ ರಸ್ತೆ ಬಳಸುವ ಇತರರ ನೋಟಕ್ಕೆ ತೊಂದರೆ ಉಂಟಾಗುವುದಲ್ಲದೇ ಜೀಬ್ರಾ ಪಟ್ಟಿದಾಟುವ ಪಾದಚಾರಿಗಳಿಗೆ ಅಸುರಕ್ಷಿತವಾಗುತ್ತದೆ. 

ಕೆಂಪು ಸಂಚಾರಿ ಸೂಚಕ ದೀಪವಿರುವಾಗಲು ಎಡಗಡೆ ತಿರುಗಬಹುದು,  ಆದರೆ ತಿರುಗಕೂಡದು ಎಂದು ನಿರ್ದಿಷ್ಟ ಸೂಚಕವಿರುವಾಗ ಮಾತ್ರ ಹೋಗಕೂಡದು.  ತಿರುಗುವಾಗ ಪಾದಚಾರಿ ಹಾಗೂ ಬೇರೆ ದಿಕ್ಕಿನಿಂದ ಬರುವ ವಾಹನಗಳಿಗೆ ಬಲಗಡೆ ಜಾಗಕೊಡಿ. 

                                                                                               

ಜಾಗರೂಕರಾಗಿರಿ:

ಹಸಿರು ಬಣ್ಣದ ಸಂಚಾರಿ ಸೂಚಕ ದೀಪದಿಂದ ಕೆಂಪು ದೀಪ ಬರುವ ಮುನ್ನ ರಸ್ತೆಯಲ್ಲಿರುವ ವಾಹನಗಳು ತೆರವುಗೊಳ್ಳುವ ಸಮಯಕ್ಕಾಗಿ ಹಳದಿ ಬಣ್ಣದ ಸೂಚಕ ದೀಪ ಬರುತ್ತದೆ.  ಅಗಲವಾದ ರಸ್ತೆದಾಟುವಾಗ ಕೆಂಪು ದೀಪ ಬಂದಲ್ಲಿ ಗಲಿಬಿಲಿಗೊಂಡು ವಾಹನದ ವೇಗವನ್ನು ಹೆಚ್ಚಿಸದೇ ಜಾಗರೂಕರಾಗಿ ವಾಹನವನ್ನು ಮುಂದೆ ಚಾಲಯಿಸಿ.

           

ಹೋಗಿ:

ನೀವು ರೇಖೆಯ ಮುಂಭಾಗದಲ್ಲಿ ಇದ್ದಲ್ಲಿ ಹಸಿರು ದೀಪ ಬಂದ ತಕ್ಷಣ ಹೋರಡ ಬೇಡಿ, ಬೇರೆ ದಿಕ್ಕುಗಳಿಂದ ಬರುವ ವಾಹನಗಳು ತೆರವುಗೊಂಡಿವೆ ಎಂದು ಖಚಿತಪಡಿಸಿಕೊಂಡು ಹೋರಡಿ.

ಕೆಲವೊಮ್ಮೆ ನೀವು ಎಡಕ್ಕೆ ಬಲಕ್ಕೆ ತಿರುಗಬಹುದು.  ಆದರೆ ಬೇರೆ ದಿಕ್ಕುಗಳಡೆ ಬೇರೆ ನಿರ್ದಿಷ್ಟ ಸೂಚಕವಿಲ್ಲದಿದ್ದಲ್ಲಿ ಸ್ಥಿರ ಹಸಿರು ಬಾಣ ಸೂಚಕ ಸೂಚಿಸಿದ ದಿಕ್ಕಿನಡೆ ಜಾಗರೂಕತೆಯಿಂದ ಚಲಿಸಿ,  ರೇಖಾ ಬೇದನೆಯಲ್ಲಿರುವ ಪಾದಚಾರಿಗಳು ಹಾಗು ಇತರ ವಾಹನಗಳ ಚಾಲನೆ ಜ್ಞಾಪನವಿರಲಿ.

                                                                                                      

ಹೊಳೆಯುವ ಕೆಂಪು ದೀಪ:

ನೀವು ಸಂಪೂರ್ಣವಾಗಿ ನಿಲ್ಲಿಸಿ ಬೇರೆ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಮಾರ್ಗ ಬಿಟ್ಟುಕೊಡಬೇಕು.  ಮಾರ್ಗ ತೆರವುಗೊಂಡ ನಂತರವೇ ಮುಂದೆ ಚಲಿಸಬೇಕು. 

 

ಹಳದಿ ಸೂಚಕ:

 ವಾಹನ ನಿಧಾನಗೊಳಿಸಿ ಜಾಗರೂಕತೆಯಿಂದ ಮುಂದುವರೆಯಬೇಕು.                            

 

ಸೂಚನ ಫಲಕಗಳು 

 

                                    

 

 

ಇತ್ತೀಚಿನ ನವೀಕರಣ​ : 30-10-2020 01:34 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080