ಅಭಿಪ್ರಾಯ / ಸಲಹೆಗಳು

ರಕ್ಷಣಾ ಸೂಚನೆಗಳು

ಅಪರಾಧ ತಡೆಗಟ್ಟಲು  ಕೆಳಗಿನ ಮುನ್ನೆಚರಿಕೆ ಕ್ರಮಗಳನ್ನು ಅನುಸರಿಸಿ.

  1. ಮನೆಯ ಮುಂಬಾಗಿಲು ಗಟ್ಟಿ ಹಾಗೂ ಧೃಢವಾಗಿರಬೇಕು, ಬಾಗಿಲು ಹಾಗೂ ಕಿಟಕಿಗಳು ಮುಚ್ಚಿರಬೇಕು ಮತ್ತು ಒಳ್ಳೆಯ ಗುಣಮಟ್ಟದ ಬೀಗಗಳನ್ನು ಬಳಸಬೇಕು.
  2. ಪರಸ್ಥಳಕ್ಕೆ ಹೋಗುವಾಗ ಅಕ್ಕಪಕ್ಕದ ಮನೆಯವರಿಗೆ ನಿಮ್ಮ ಮನೆ ಕಡೆ ನೀಗಾಯಿಡುವಂತೆ ತಿಳಿಸಿ.
  3. ಅಪರಿಚಿತರಿಗೆ ನೀವು ಪರಸ್ಥಳಕ್ಕೆ ಹೋಗುವ ಬಗ್ಗೆ ವಿಷಯ ತಿಳಿಯದಿರುವುದನ್ನು ಖಚಿತಪಡಿಸಿಕೊಳ್ಳಿ
  4. ಅಪರಿಚಿತರು ನಿಮ್ಮ ಮೊಹಲ್ಲಾ ಅಥವಾ ಆಸುಪಾಸಿನಲ್ಲಿ ಸುಳಿದಾಡುತಿರುವುದು ಕಂಡು ಬಂದಲ್ಲಿ ಪೊಲೀಸರಿಗೆ ತಿಳಿಸಿ.
  5. ಮನೆ ಕೆಲಸದವರ ಹೆಸರು, ವಿಳಾಸ, ಭಾವಚಿತ್ರ ಸಂಪರ್ಕದ ವಿವರ ಬಳಿ ಇಟ್ಟು ಕೊಳ್ಳಿ.
  6. ನಿಮ್ಮ ವಾಹನ ಹಾಗೂ ಇತರೆ ಬೆಲೆ ಬಾಳುವ ವಸ್ತುಗಳಿಗೆ ವಿಮೆ ಮಾಡಿಸಿ.
  7. ನಿಮ್ಮ ವಾಹನಗಳಿಗೆ ಬೀಗ ಹಾಕದೆ ನಿಲ್ಲಿಸಬೇಡಿ ಮತ್ತು ಸಾಧ್ಯವಾದಷ್ಟು ಹಣ ಕೊಟ್ಟು ನಿಲ್ಲಿಸುವ ಸವಲತ್ತನ್ನು ಉಪಯೋಗಿಸಿ.
  8. ವಾಹನಗಳಲ್ಲಿ ಬೆಲೆ ಬಾಳುವ ವಸ್ತುಗಳನ್ನಿರಿಸಿ ನಿಲ್ಲಿಸಬೇಡಿ.
  9. ನೀವು ಬಾರಿ ಮೊತ್ತವನ್ನು ಪರಸ್ಥಳಕ್ಕೆ ಕೊಂಡೂಯ್ಯೂತ್ತಿದ್ದಲ್ಲಿ, ನಿಮ್ಮ ಜೊತೆಗೆ ಯಾರನ್ನಾದರೂ ಇರಿಸಿಕೊಳ್ಳಿ, ಇಲ್ಲದಿದ್ದಲ್ಲಿ ಪೊಲೀಸ್ ಸಹಾಯ ಪಡೆಯಿರಿ.
  10. ಬೇರೆಯವರಿಗೆ ಕಾಣುವ ರೀತಿ ಹಣ ಎಣಿಸಬೇಡಿ.
  11. ನೀವು ಧರಿಸಿರುವ ಬಟ್ಟೆಯಿಂದ ಚಿನ್ನದ ಸರ ಮುಚ್ಚಿಡಿ.
  12. ನೀವು ಪ್ರಯಾಣ ಮಾಡವಾಗ ಅಪರಿಚಿತ ವ್ಯಕ್ತಿಗೆ ನಿಮ್ಮ ಸಾಮಾನು ಸರಂಜಾಮುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನೀಡಬೇಡಿ.
  13. ಅಪರಿಚಿತರಿಂದ ಯಾವುದೇ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ತಿನ್ನಬೇಡಿ.
  14. ಸಹ ಪ್ರಯಾಣಿಕರಿಗೆ ನಿಮ್ಮ ವೈಯಕ್ತಿಕ ವಿವರಗಳನ್ನು ನೀಡಬೇಡಿ.
  15. ಅಪರಿಚಿತರನ್ನು ಮನೆಯ ಒಳಗೆ ಸೇರಿಸ ಬೇಡಿ.
  16. ಮಹಿಳೆಯರು ತಮ್ಮ ಚಿನ್ನಾಭರಣಗಳನ್ನು ಸ್ವಚ್ಛಗೊಳಿಸಲು ಕೊಡಕೊಡದು.
  17. ಅಪರಿಚಿತರ ಜೊತೆ ಅತಿಯಾದ ಸ್ನೇಹ ಬೆಳೆಸಬೇಡಿ.
  18. ಮನೆ ಕೆಲಸದವರ ಹಾಗೂ ವಾಹನ ಚಾಲಕರ ಹೆಸರನ್ನು ಸಮೀಪದ ಪೊಲೀಸ್ ಠಾಣೆಯಲ್ಲಿ ಸೂಕ್ತವಾದ ನಮೂನೆಯಲ್ಲಿ  ಭರ್ತಿ  ಮಾಡಿ ನೋಂದಾಯಿಸಿರಿ.
  19. ಭಾವಚಿತ್ರದೊಂದಿಗೆ ಭರ್ತಿ ಮಾಡಿದ ನಮೂನೆಯನ್ನು ಕೆಲಸಗಾರರ ಸ್ವಂತ ಊರಿನ ಪೊಲೀಸ್ ಠಾಣೆಗೆ ಕಳುಹಿಸಿ ಅವರ ಹಿನ್ನೆಲೆಯನ್ನು ಪರಿಶೀಲಿಸಿ ಪಡೆಯ ಬಹುದು.
  20. ಮುನ್ನೆಚ್ಚರಿಕೆ ಕ್ರಮವಾಗಿ ರಕ್ಷಣೆ ನೀಡಲು ಸಹಕರಿಸುವ ಬಾಗಿಲಿನಲ್ಲಿ ಇಣುಕು ಕಿಂಡಿ, ರಕ್ಷಣಾ ಚಿಲಕ ಅಥವಾ ಕಬ್ಬಿಣದ ಬಾಗಿಲನ್ನು ಅಳವಡಿಸಿ ಇದರಿಂದ ಬರುವ ಪ್ರತಿಯೊಬ್ಬರನ್ನು ನೋಡಬಹುದು.  ಹಾಗೂ ಅಪರಿಚಿತ ವ್ಯಕ್ತಿಗಳಾದ ತರಕಾರಿ ಮಾರುವವರು, ಅಗಸ, ಹಾಲು ಮಾರುವವರನ್ನು ಒಳಗೆ ಸೇರಿಸುವ ಮುನ್ನ ಹೆಚ್ಚಿನ ಜಾಗರೂಕತೆಯನ್ನು ವಹಿಸಿ.
  21. ಮನೆ ಕೆಲಸಗಾರರ ಮುಂದೆ ಬೀರೂವಿನ ಬಾಗಿಲನ್ನು ತೆರೆಯುವುದಾಗಲೀ, ಬೆಲೆ ಬಾಳುವ ವಸ್ತುಗಳನ್ನು ತೋರಿಸುವುದಾಗಲೀ, ಹಣಕಾಸಿನ ವಿಚಾರ ಚರ್ಚಿಸುವುದಾಗಲೀ ಮಾಡಬಾರದು.
  22. ಇದರಿಂದ ಅವರು ಕಾನೂನು ಬಾಹಿರ ಕೃತ್ಯವೆಸಗಲು ಪ್ರೇರೇಪಿತರಾಗಬಹುದು.
  23. ಮನೆ ಕೆಲಸದವರ ಸಂಬಳ ಹಿಡಿದುಕೊಳ್ಳ ಬೇಡಿ, ಅವರನ್ನು ಕಡೆಗಣಿಸಬೇಡಿ, ಹೇನಾಯ ಮಾಡಬೇಡಿ ಇದರಿಂದ ಅವರು ದ್ವೇಷ ಸಾಧಿಸಬಹುದು.
  24. ನೀವು ಸ್ನೇಹಿತರ ಹಾಗೂ ಅಕ್ಕಪಕ್ಕದವರೊಂದಿಗೆ ಸಂಪರ್ಕ ಬೆಳೆಸಿಕೊಳ್ಳಿ. ಇದರಿಂದ ನೀವು ಏಕಾಂಗಿ ಅಲ್ಲವೆಂದು ಖಚಿತ ಪಡಿಸಿಕೊಳ್ಳಿ.  ನಿತ್ಯ ಗುಂಪಿನೊಂದಿಗೆ ವಾಯು ವಿಹಾರಕ್ಕೆ ಹೋಗಿ ಸಾಮಾಜಿಕರಾಗಿ.
  25. ಬೆಲೆ ಬಾಳುವ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ. ಚಿನ್ನಾಭರಣಗಳನ್ನು ಬ್ಯಾಂಕಿನ ಲಾಕರಿನಲ್ಲಿ ಇಡಿ.  ಹಣಕಾಸನ್ನು ನಿಮ್ಮ ಉಳಿತಾಯ ಖಾತೆಯಲ್ಲಿ ಇಡಿ.
  26. ಮುಖ್ಯ ದೂರವಾಣಿ ಸಂಖ್ಯೆಗಳನ್ನು ಕೈಗೆಟುಕುವಂತೆ ಇಟ್ಟು ಕೊಳ್ಳಿ. ಇದರಲ್ಲಿ ಸ್ನೇಹಿತರ ಸಂಬಂಧಿಕರ, ಹತ್ತಿರದವರ ಮತ್ತು ಸ್ಥಳೀಯ ಪೊಲೀಸ್ ಠಾಣೆಯ ಸಂಖ್ಯೆಗಳನ್ನು  ಸಹ ಹೊಂದಿರಬೇಕು.
  27. ತುರ್ತು ಪರಿಸ್ಥಿಯಲ್ಲಿ ದೂರವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿ.

ಇತ್ತೀಚಿನ ನವೀಕರಣ​ : 30-10-2020 01:04 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080