ಅಭಿಪ್ರಾಯ / ಸಲಹೆಗಳು

ಕಾನೂನು ಮತ್ತು ಸುವ್ಯವಸ್ಥೆ

  • ಪೊಲೀಸ್ ಅಧಿಕಾರಿಗಳು ಕರ್ತವ್ಯದ ಮೇಲಿರುವಾಗ ಸುಲಭವಾಗಿ ಸಾರ್ವಜನಿಕರ ಸಹಾಯಕ್ಕೆ ಲಭ್ಯವಾಗುವಂತಿರಬೇಕು.
  • ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ತಾನು ಕೆಲಸ ಮಾಡುತ್ತಿರುವ ಪ್ರದೇಶದಲ್ಲಿ ಶಾಂತಿಯತೆ ಕಾಪಾಡಿ, ಅಲ್ಲಿಯ ಜನರ ಹಾಗೂ ಆಸ್ತಿ ಪಾಸ್ತಿಯನ್ನು ಕಾಪಾಡಲು ಸುರಕ್ಷತೆ ಒದಗಿಸುವುದು ಆದ್ಯ ಕರ್ತವ್ಯವಾಗಿರುತ್ತದೆ.
  • ಪೊಲೀಸ್ ಠಾಣೆಯಲ್ಲಿ ಇರುವಂತಹ ಪೊಲೀಸ್ ಪೇದೆಯನ್ನು/ಮುಖ್ಯ ಪೇದೆಯನ್ನು ಅಲ್ಲಿನ ಪ್ರದೇಶದ ಗಸ್ತು ಕಾರ್ಯ ಸೇವೆ ನಿರ್ವಹಿಸುವುದಕ್ಕಾಗಿ, ಪೊಲೀಸ್ ಠಾಣೆಯ ಅಧಿಕಾರ ವ್ಯಾಪ್ತಿಯು ಸಾಮಾನ್ಯವಾಗಿ ಅನುಕೂಲಕರ ರೀತಿಯಲ್ಲಿ ವಿಭಜನೆಗೊಂಡಿರುತ್ತದೆ.
  • ಯಾವುದೇ ಗಂಭೀರವಾದ ಗೊಂದಲ, ಶಾಂತಿಯತೆ ಹಾಳಾಗುವಂತಹ ಕೆಲಸಗಳನ್ನು ತಡೆಗಟ್ಟಲು ಬೇಕಾಗುವ ಎಲ್ಲಾ ಮುಂಜಾಗರುಕತೆಯನ್ನು ಸರಿಯಾದ ರೀತಿ ಹಾಗೂ ಸಮಯದಲ್ಲಿ ತೆಗೆದುಕೊಳ್ಳವುದು ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯ ಕರ್ತವ್ಯ. ಒಂದು ವೇಳೆ ಏನಾದರೂ ಸಂಭವಿಸಿದ್ದಲ್ಲಿ, ಪರಿಸ್ಥಿತಿಯನ್ನು ಸಹಜ  ಸ್ಥಿತಿಗೆ ತರಲು ಬೇಕಾಗುವ ಎಲ್ಲಾ ಕ್ರಮಗಳನ್ನು ಪೊಲೀಸ್ ಅಧಿಕಾರಿ ತೀವ್ರಗತಿಯಲ್ಲಿ ತೆಗೆದುಕೊಳ್ಳಬೇಕು.
  • ಶಾಂತಿಯತೆ ಕಾಪಾಡಲು ಆ ಪ್ರದೇಶದ ಮುಖ್ಯ ವ್ಯಕ್ತಿಗಳೊಂದಿಗೆ, ಪ್ರದೇಶದ ನಾಗರಿಕ ಮಂಡಳಿ, ಶಾಂತಿ ಸಭೆಗೆ ಮತ್ತು ಪ್ರದೇಶ ಸಭೆಗಳ ಮೂಲಕ ಪೊಲೀಸ್ ಅಧಿಕಾರಿ ನಿಕಟ ಸಂಪರ್ಕ ಹೊಂದಿರಬೇಕು.
  • ಆ ಪ್ರದೇಶದಲ್ಲಿರುವ ಸಮಾಜ ವಿರೋಧಿ, ಗೂಂಡಾ, ರೌಡಿ ಇರವರುಗಳ ವಿರುದ್ದ ಧೃಡ ನಿರ್ಧಾರ ತೆಗೆದುಕೊಳ್ಳುವುದು ಎಲ್ಲಾ ಪೊಲೀಸ್ ಅಧಿಕಾರಿಗಳ ಕರ್ತವ್ಯ.
  • ಹಬ್ಬ, ಜಾತ್ರೆ, ಸಾರ್ವಜನಿಕ ಸಮಾರಂಭ, ಮೆರವಣಿಗೆ, ಮುಷ್ಕರ, ಪ್ರತಿಭಟನೆ ಮುಂತಾದ ಸಂದರ್ಭಗಳಲ್ಲಿ ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಅಧಿಕಾರಿಗಳ ಕರ್ತವ್ಯ.
  • ಜನಾಂಗ, ಜಾತಿ, ಮತ, ಭಾಷೆ, ಪ್ರದೇಶ, ಲಿಂಗ ಅಥವಾ ರಾಜಕೀಯ ಪಕ್ಷಗಳು ಮುಂತಾದವುಗಳ ಬಗ್ಗೆ, ಪೊಲೀಸ್ ಅಧಿಕಾರಿ ಯಾವುದೇ ತಾರತಮ್ಯ ತೋರಿಸಬಾರದು.
  • ಸಮಯದಿಂದ ಸಮಯಕ್ಕೆಸರ್ಕಾರಿ ನಿಗದಿ ಪಡಿಸಿದ ಶುಲ್ಕದ ಪಾವತಿಯ ಮೇರೆಗೆ ಪೊಲೀಸ್ ಅಧಿಕಾರಿಯ ಸೇವೆಯನ್ನು ಮನೋರಂಜನಾ ಕಾರ್ಯಕ್ರಮಗಳ ನಡೆಯುವ ಸ್ಥಳಗಳಲ್ಲಿ ಸ್ವಲ್ಪ ಸಮಯಕ್ಕಾಗಿ ಪಡೆಯಬಹುದು.
  • ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ವಿಷಯದಲ್ಲಿ ಮತ್ತು ಸಮಾಜದ ಒಳಿತಿಗಾಗಿ ಸಾರ್ವಜನಿಕರು ತಮ್ಮ ಸಹಾಯ, ಸಹಕಾರ ಹಾಗೂ ಮಾಹಿತಿಗಳನ್ನು ನೀಡಬಹುದು.

ಇತ್ತೀಚಿನ ನವೀಕರಣ​ : 30-10-2020 01:06 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080