ಅಭಿಪ್ರಾಯ / ಸಲಹೆಗಳು

ಪರದೇಶದವರ ನೊಂದಾವಣಿ ಹಾಗೂ ಪಾಸ್ ಪೋರ್ಟ್ ತಪಾಸಣೆ ಮಾರ್ಗದರ್ಶನ

ಭಾರತೀಯ ನಾಗರೀಕರಿಗೆ ಭಾರತೀಯ ಪಾಸ್ ಪೋರ್ಟ್ ನೀಡುವ ಜವಾಬ್ದಾರಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಾಯಭಾರ (ಕನ್ಸುಲರ್) ಪಾಸ್ ಪೋರ್ಟ್ ಕಛೇರಿ ಮತ್ತು ಪ್ರಯಾಣಾನುಮತಿ (ವೀಸಾ) ವಿಭಾಗ ಹೊಂದಿದೆ.  ಈ ದಾಖಲೆಯನ್ನು ದೇಶಾದ್ಯಾಂತ 28 ಸ್ಥಳಗಳಲ್ಲಿ ಮತ್ತು 160 ವಿದೇಶಿ ಭಾರತೀಯ ನಿಯೋಗ ಮಂಡಳಿ/ವರ್ಗಗಳಲ್ಲಿ ನೀಡಲಾಗುತ್ತಿದೆ.

ನಿಮ್ಮ ಪ್ರಸ್ತುತ ವಿಳಾಸದ ವ್ಯಾಪ್ತಿಯೊಳಗೆ ಬರುವ ಪಾಸ್ ಪೋರ್ಟ್ ಕಚೇರಿಗೆ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಲು ನೀವು ಪಾಸ್ ಪೋರ್ಟ್ ಕಛೇರಿಯಿಂದ ಅರ್ಜಿಯನ್ನು ಪಡೆಯಬಹುದು.  ಅಥವಾ ನಿಯಮಿತ ಸ್ಪೀಡ್ ಪೋಸ್ಟ್ ಕೇಂದ್ರ ಅಥವಾ ಇದಕ್ಕಾಗಿ ನಿಯಮಿತಗೊಂಡ ಹೊರಗಿನವರಲ್ಲಿ ಅರ್ಜಿಯನ್ನು ಪಡೆಯಬಹುದು. ಬರ್ತಿ ಮಾಡಿದ ಅರ್ಜಿ ಜೊತೆಗೆ ನೀವು ಮನೆ ವಿಳಾಸದ ಸಾಕ್ಷಾಧಾರ, ಜನನ ದಿನಾಂಕದ ದಾಖಲೆ ಇ.ಸಿ.ಎನ್.ಆರ್.ಗೆ ಹೆಸರು ಬದಲಾವಣೆಗೊಂಡ ದಾಖಲೆ, ಕಾಲಾವಧಿ ಮೀರಿದ ಪಾಸ್ ಪೋರ್ಟ್(ಯಾವುದಾದರು ಇದ್ದಲ್ಲಿ), ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು ಇತ್ಯಾದಿ.  ಪಾಸ್ ಪೋರ್ಟ್ ಕಛೇರಿಯಲ್ಲಿ ಅರ್ಜಿ ಸಲ್ಲಿಸುವಾಗ ಸ್ವಯಂ ದೃಢೀಕೃತ ಪ್ರಮಾಣ ಪತ್ರಗಳನ್ನು, ದಾಖಲೆಗಳನ್ನು ಮೂಲ ದಾಖಲಾತಿಗಳ ಜೊತೆ ಪರಿಶೀಲಿಸುವರು.  ಅಂಚೆ ಮೂಲಕ ಕಳುಹಿಸುವ ಅರ್ಜಿಯ ಜೊತೆಗಿನ ಪ್ರಮಾಣಪತ್ರ ಮತ್ತು ದಾಖಲೆಗಳ ಮೇಲೆ ಗೆಜೆಟೆಡ್ ಅಧಿಕಾರಿಯ ಸಹಿ ಮಾಡಿಸಿರಬೇಕು.  ಸಾಮಾನ್ಯವಾಗಿ 5 ರಿಂದ 6 ವಾರ ಗಳಲ್ಲಿ ಪಾಸ್ ಪೋರ್ಟ್ ಅನ್ನು ನೀಡಲಾಗುವುದು  ತುರ್ತು ಪರಿಸ್ಥಿತಿಯಲ್ಲಿ ಹೊಸ ಅಥವಾ ನಕಲು ಪಾಸ್ ಪೋರ್ಟ್ ತತ್ಕಾಲ್ ಯೋಜನ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು.  ಸಾಮಾನ್ಯವಾಗಿರುವ ಶುಲ್ಕಕ್ಕಿಂತ ತತ್ಕಾಲ್ ಯೋಜನೆ ಅಡಿಯಲ್ಲಿ ಹೆಚ್ಚಿನ ಮತ್ತು ಅಧಿಕ ಶುಲ್ಕವನ್ನು ಪಡೆದು ಪಾಸ್ ಪೋರ್ಟ್ ನೀಡಲಾಗುವುದು.  ತತ್ಕಾಲ್ ಯೋಜನೆ ಅಡಿಯಲ್ಲಿ ಪೊಲೀಸ್ ಪರಿಶೀಲನಾ ವರದಿ (ನಕಲು ಪಾಸ್ ಪೋರ್ಟ್, ವಿಳಾಸ ಬದಲಾವಣೆಯಿಲ್ಲದೆ ಪಾಸ್ ಪೋರ್ಟ್ ಮರುನೀಡಿಕೆ,  ಎನ್.ಒ.ಸಿ ಹೊಂದಿದ ಸರ್ಕಾರೀ ಉದ್ಯೋಗಿ ಅವನ ಮಕ್ಕಳು ಮತ್ತು ಪರಿಶೀಲನಾ ಪ್ರಮಾಣ ಪತ್ರ ಹೊಂದಿದ ಅರ್ಜಿಗಳಿಗೆ) ಇದು ಅನ್ವಯಿಸುತ್ತದೆ.

ವೀಸಾ:

ಭಾರತಕ್ಕೆ ಬರಲು ಅಪೇಕ್ಷಿಸುವ ವಿದೇಶಿ ನಾಗರೀಕರು ತಮ್ಮ ದೇಶದ ಊರ್ಜಿ ಪಾಸ್ ಪೋರ್ಟ್ ನ್ನು ಮತ್ತು ಭಾರತದ ಊರ್ಜಿತ ವೀಸಾವನ್ನು ಹೊಂದಿರಬೇಕು.  ಭಾರತಕ್ಕೆ ತಲುಪಿದ ಮೇಲೆ ಇಲ್ಲಿ ವೀಸಾ ಸೌಲಭ್ಯವಿರುವುದಿಲ್ಲ.  ನೇಪಾಳ್ ಮತ್ತು ಭೂತಾನ್ ನಾಗರೀಕರು ಭಾರತ ಪ್ರವೇಶಿಸಲು ವೀಸಾ ಅವಶ್ಯಕತೆ ಇರುವುದಿಲ್ಲ ಮತ್ತು ಮಾಲ್ಡೀವ್ಸ್ ನಾಗರೀಕರು 90 ದಿನಗಳ ಅವಧಿಯವರೆಗೆ ಭಾರತದಲ್ಲಿ ಪ್ರವೇಶಿಸಲು ವೀಸಾ ಅವಶ್ಯಕತೆ ಇರುವುದಿಲ್ಲ.  ಆದರೆ ವಿದೇಶಿ ಪ್ರಯಾಣಿಕರು ಭಾರತಕ್ಕೆ ಪ್ರಯಾಣ ಬೆಳೆಸುವ ಮುನ್ನ ತಮ್ಮ ಬಳಿ ಊರ್ಜಿತ ಭಾರತೀಯ ವೀಸಾ ಇರುವುದರ ಬಗ್ಗೆ ಖಾತರಿಪಡಿಸಬೇಕು.  ರಾಯಭಾರಿ/ಅಧಿಕೃತ ಪಾಸ್ ಪೋರ್ಟ್ ಹೊಂದಿದವರಿಗೆ ಪ್ರತ್ಯೇಕ ವೀಸಾ, ಆಡಳಿತದ ಕ್ರಮವಿರುತ್ತದೆ.
        ವಿದೇಶಿ ನಾಗರೀಕರು ಭಾರತಕ್ಕೆ ವಿವಿಧ ಉದ್ದೇಶಗಳಿಗಾಗಿ ಭೇಟಿ ನೀಡಲು ಬರುವವರಿಗೆ ರಾಯಭಾರ (ಕನ್ಸುಲರ್) ಪಾಸ್ ಪೋರ್ಟ್ ಕಛೇರಿ ಮತ್ತು ಪ್ರಯಾಣಾನುಮತಿ ವಿಭಾಗ (ವೀಸಾ), ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತೀಯ ವೀಸಾ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತದೆ.  ಈ ಸೌಲಭ್ಯವನ್ನು ವೀಸಾ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತದೆ.  ಈ ಸೌಲಭ್ಯವನ್ನು ವಿದೇಶದಲ್ಲಿರುವ ವಿವಿಧ ಭಾರತೀಯ ನಿಯೋಗಗಳ ಮೂಲಕ ಒದಗಿಸಲಾಗುವುದು.  ವೀಸಾ ಶುಲ್ಕ ಮರುಪಾವತಿಸಲಾಗುವುದಿಲ್ಲ ಮತ್ತು ಸೂಚನೆ ಇಲ್ಲದೆ ಬದಲಾಗಬಹುದು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪಾವತಿಸಿದ ಶುಲ್ಕ ಎಷ್ಟೇ ಇದ್ದರೂ ವೀಸಾದ ಕಾಲಾವಧಿ ಮತ್ತು ವಿಧವನ್ನು ನೀಡುವ ಹಕ್ಕನ್ನು ಉನ್ನತ ಆಯೋಗವು ಕಾಯ್ದಿರಿಸಿಕೊಂಡಿದೆ.  ವೀಸಾ ಮಂಜೂರಾತಿ ಭಾರತಕ್ಕೆ ಪ್ರವೇಶಿಸುವ ಹಕ್ಕನ್ನು ನೀಡುವುದಿಲ್ಲ ಮತ್ತು ಇದು ವಲಸೆ ಪ್ರಾಧಿಕಾರದ ವಿವೇಚನಾಧಿಕಾರಕ್ಕೆ ಬಿಟ್ಟಿರುತ್ತದೆ.
        ವಿವಿಧ ಉದ್ದೇಶಗಳಿಗೆ ಆದರದೇ ಆದ ನಿರ್ದಿಷ್ಠ ವೀಸಾಗಳನ್ನು ನೀಡಲಾಗುವುದು.

 ಪ್ರಧಾನವಾಗಿ ನೀಡುವ ವೀಸಾ ವಿಧಗಳು ಈ ಕೆಳಗಿನಂತಿವೆ.

ಪ್ರವಾಸಿ ವೀಸಾ:

 ಸಾಮಾನ್ಯವಾಗಿ ಈ ವಿದಧ ವೀಸಾ 6 ತಿಂಗಳ ಅವಧಿಯದಾಗಿರುತ್ತದೆ.  ಅಭ್ಯರ್ಥಿ ತನ್ನ ಆರ್ಥಿಕ ನಆರ್ತಿಕ ಸ್ಥಿತಿಯ ಪುರಾವೆಯ ಬಗ್ಗೆ ದಾಖಲಾತಿಗಳನ್ನು ನೀಡಬೇಕು.  ವಿದೇಶಿ ವೀಸಾಗಳನ್ನು ಮುಂದುವರೆಸಲಾಗುವುದಿಲ್ಲ ಮತ್ತು ಮರು ಪರಿವರ್ತಿಸಲಾಗುವುದಿಲ್ಲ.

ವ್ಯವಹಾರ/ವ್ಯಾಪಾರಿ ವೀಸಾ:

ಸಾಮಾನ್ಯವಾಗಿ ಇದು ಒಂದು ಅಥವಾ ಹೆಚ್ಚು/ಅಧಿಕ ವರ್ಷಗಳ ಅವಧಿಯದಾಗಿದ್ದು, ಅಧಿಕ ನಮೂದುಗಳನ್ನು ಹೊಂದಿರುತ್ತದೆ.  ಪುರಸ್ಕರಿಸುವ ಸಂಸ್ಥೆಯ ಪತ್ರ, ವ್ಯಾಪಾರದ ಬಗೆ, ಅಲ್ಲಿ ಉಳಿಯಬೇಕಾದ ಕಾಲಾವಧಿ ಈ ಸಂಬಂಧ ಸಂದರ್ಶಿಸುವ ಸ್ಥಳಗಳು ಮತ್ತು ಸಂಸ್ಥೆಗಳು ಹಾಗೂ ಇದಕ್ಕೆ ಆಗುವ ವೆಚ್ಚ ಇತ್ಯಾದಿಗಳ ಬಗ್ಗೆಅರ್ಜಿಯೊಂದಿಗೆ ಸಲ್ಲಿಸಬೇಕು.

ವಿದ್ಯಾರ್ಥಿ ವೀಸಾ:

ವಿದ್ಯಾಭ್ಯಾಸದ ಶೈಕ್ಷಣಿಕ ಅವಧಿಯವರೆಗೆ ಅಥವಾ ಐದು ವರ್ಷಗಳ ಅವಧಿಗೆ ಯಾವುದು ಕಡಿಮೆಯೋ ಅದಕ್ಕೆ ನೀಡಲಾಗುವುದು.  ಭಾರತದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಲ್ಲಿ ಪ್ರವೇಶಾತಿ ಬಗ್ಗೆ ಪಡೆದ ಪುರಾವೆ ನೀಡುವುದು ಅತ್ಯಂತ ಮುಖ್ಯವಾಗಿದೆ.  ಉದ್ದೇಶ ಮತ್ತು ಸಂಸ್ಥೆಯನ್ನು ಬದಲಾಯಿಸುವುದಕ್ಕೆ ಅವಕಾಶವಿರುವುದಿಲ್ಲ. 

ಸಾಗಣೆ/ಪ್ರಯಾಣ ವೀಸಾ:

ಈ ವೀಸಾದ ಗರಿಷ್ಠ ಅವಧಿಯಲ್ಲಿ 15 ದಿನಗಳದಾಗಿದ್ದು, ಒಂದು ಅಥವಾ ಎರಡು ನಮೂದುಗಳ ಸೌಲಭ್ಯ ಹೊಂದಿರುತ್ತದೆ.  ಭಾರತಕ್ಕೆ ಪ್ರವೇಶಿಸುವ ವಿಮಾನ ನಿಲ್ದಾಣಗಳಲ್ಲಿ  ಇರುವ ವಲಸೆ ಕೇಂದ್ರಗಳಲ್ಲಿ ಪ್ರಯಾಣ ವೀಸಾ ಪಡೆಯಲು ಸಾಧ್ಯವಿಲ್ಲ.  ಭಾರತದಲ್ಲಿ ಈ ಪ್ರಯಾಣ ವೀಸಾವನ್ನು ಮುಂದುವರೆಸಲು ಸಾಧ್ಯವಿಲ್ಲ.

ಧರ್ಮ ಪ್ರಚಾರಕರ (ಮಿಷನರಿ) ವೀಸಾ:

ಈ ವೀಸಾದಲ್ಲಿ ಒಂದು ಬಾರಿ ಮಾತ್ರ ಪ್ರವೇಶಿಸಲು ಅವಕಾಶವಿದೆ.  ಮತ್ತು ಭಾರತ ಸರ್ಕಾರ ಅನುಮತಿ ನೀಡುವ ಕಾಲಾವಧಿಗೆ ಮಾತ್ರ ಸೀಮಿತವಾಗಿರುತ್ತದೆ.  ಪುರಸ್ಕರಿಸುವ ಸಂಸ್ಥೆಯು ಮೂರು ಪ್ರತಿಗಳಲ್ಲಿ ಇವರು ಭೇಟಿ ನೀಡುವ ಸ್ಥಳಗಳು, ಪ್ರಾಯಶ: ಉಳಿಯ ಬಹುದಾದ ಕಾಲಾವಧಿ ಇಲ್ಲಿ ಮಾಡುವ/ಕೈಗೊಳ್ಳುವ ಕಾರ್ಯ ಚಟುವಟಿಕೆಗಳ ಬಗ್ಗೆ ಮತ್ತು ಇವರು ಭಾರತದಲ್ಲಿ ಉಳಿಯುವಷ್ಟು ಕಾಲಾವಧಿಗೆ ಇವರ ನಿರ್ವಹಣೆಯ ಬಗ್ಗೆ ಖಚಿತ ಮಾಹಿತಿ ಒದಗಿಸಬೇಕು.

ಪತ್ರಕರ್ತರ ವೀಸಾ :

ಭಾರತಕ್ಕೆ ಭೇಟಿ ನೀಡಲು ಬರುವ ಉನ್ನತ ತಜ್ಞ ಪತ್ರಕರ್ತರು ಮತ್ತು ಛಾಯಾಗ್ರಾಹಕರಿಗೆ ಈ ವೀಸಾವನ್ನು ನೀಡಲಾಗುವುದು.  ಅಭ್ಯರ್ಥಿಗಳು ದೆಹಲಿಗೆ ಬಂದ ತಕ್ಷಣ ಬಾಹ್ಯ ಪ್ರಚಾರ ವಿಭಾಗ, ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಬೇಕು.  ಹಾಗೂ ಇನ್ನುಲೀದ ಕಡೆಗಳಲ್ಲಿ ಭಾರಸರ್ಕಾರದ ಪತ್ರಿಕಾ ಮಾಹಿತಿ ವಿಭಾಗದ ಕಛೇರಿಗಳಾದ: 

  ಸಮ್ಮೇಳನ ವೀಸಾ :

ಇವುಗಳನ್ನು ಸಂಪರ್ಕಿಸಬೇಕು.  ನೀವು ಭಾರತದಲ್ಲಿ ಭಾಗವಹಿಸುವ  ಸಮ್ಮೇಳನ, ವಿಚಾರ ಸಂಕಿರಣ ಸಭೆಗಳಿಗಾಗಿ ಈ ವೀಸಾವನ್ನು ನೀಡಲಾಗುವುದು.  ನೀವು ಭಾಗವಹಿಸುವ ಸಂಸ್ಥೆಯ ಆಹ್ವಾನ ಪತ್ರಿಕೆಯನ್ನು ಅರ್ಜಿಯ ಜೊತೆ ಸಲ್ಲಿಸಬೇಕು.

ಇತ್ತೀಚಿನ ನವೀಕರಣ​ : 30-10-2020 12:05 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080