ಅಭಿಪ್ರಾಯ / ಸಲಹೆಗಳು

ಅಪರಾಧ ತಡೆಗಟ್ಟುವಿಕೆ

ಗೃಹ ಮತ್ತು ಉದ್ಯೋಗದಲ್ಲಿ ಅಪರಾಧ ತಡೆಗಟ್ಟುವಿಕೆ ಮತ್ತು ಸೂಚನೆ

 ಬಹುತೇಕ ಅಪರಾಧಗಳಿಗೆ  ಆಯಾ ಸಂದರ್ಭಗಳಲ್ಲಿ ಸೃಷ್ಟಿಯಾದ ಸನ್ನಿವೇಶಗಳು ಅಪರಾಧ ಮಾಡಲು ಅವಕಾಶ ನೀಡುತ್ತವೆ.  ಬಲವಾದ ಅಪರಾಧಿ ಅಪರಾಧ ತಡೆ ನಿಮ್ಮಿಂದ ಆರಂಭಗೊಳ್ಳುತ್ತದೆ.  ಸಾಮಾನ್ಯ ತಿಳುವಳಿಕೆಯಿಂದ ಮತ್ತು ಅಪರಾಧ ತಡೆಗಟ್ಟುವ ತಂತ್ರಗಳನ್ನು ರೂಢಿಸಿಕೊಳ್ಳುವುದರಿಂದ ನಿಮ್ಮ ಕೌಟುಂಬಿಕ ಸದಸ್ಯರ ವ್ಯವಹಾರದ ಮತ್ತು ನಿಮ್ಮ ಕುಟುುಂಬದವರು  ಅಪರಾಧ ಮಾಡುವುದನ್ನು ಅತ್ಯಂತ ಕಡಿಮೆಗೊಳಿಸಬಹುದು.  ಈ ಕೆಳಗೆ ಅಪರಾಧ ಮಾಡಿ ಅಪರಾಧಿಯಾಗುವುದನ್ನು ಕಡಿಮೆಗೊಳಿಸುವುದಕ್ಕೆ ಕೆಲವು ಸುಲಭ ಸಲಹೆಗಳನ್ನು ನೀಡಲಾಗಿದೆ. 

 

 • ಬೀಗ ಹಾಕದೆ ಇದ್ದ ವಾಹನ ಅಥವಾ ಕಿಟಕಿ ತೆರೆದಿಟ್ಟ ವಾಹನ ಕಳ್ಳರಿಗೆ ಒಳಗೆ ನೋಡಲು ಮತ್ತು ಒಳಗೆ ಹೋಗಲು ಆಹ್ವಾನವಿದ್ದಂತೆ ಆದ್ದರಿಂದ ಯಾವಾಗಲು ನಿಮ್ಮ ವಾಹನಕ್ಕೆ ಬೀಗ ಹಾಕಿ ಮತ್ತು ಹೊರಗೆ ಕಣ್ಣಿಗೆ ಕಾಣುವಂತೆ ಏನನ್ನೂ ಬಿಡಬೇಡಿ.
 • ನಿಮ್ಮ ವಾಹನವನ್ನು ನಿರ್ಜನ ಪ್ರದೇಶದಲ್ಲಿ ಬಿಡಬೇಡಿ ಮತ್ತು ವಾಹನ ನಿಲುಗಡೆಗಳಲ್ಲಿ ವಾಹನ ನಿಲ್ಲಿಸುವಾಗ ವಾಹನದ ಬೀಗವನ್ನು ಅಲ್ಲಿಯೇ ಬಿಡಬೇಡಿ. ಜವಾಬ್ದಾರಿಯಿಂದ ನೋಡಿಕೊಳ್ಳದೆ ಇರುವ ವಾಹನವನ್ನು ಅಥವಾ ಅದರಲ್ಲಿಯೇ ಬಿಟ್ಟಿರುವ ಬೀಗದ ಕೈಗಳನ್ನು ನೋಡಿ ಅನಂತರದಲ್ಲಿ ಎತ್ತಿಕೊಂಡು ಹೋಗಲು ಕೆಲವೇ ಕೆಲವು ಕ್ಷಣಗಳು ಸಾಕು.
 • ನಿಮ್ಮ ವಾಹನ ಕಳ್ಳತನವಾದ ಸಂದರ್ಭದಲ್ಲಿ ಮತ್ತು ವಾಹನದ ಬೀಗವನ್ನು ಅದರಲ್ಲಿಯೇ ಬಿಟ್ಟಿರುವಾಗ ನಿಮ್ಮ ವಿಮೆ ಕಂಪನಿ ನಿಮಗಾದ ನಷ್ಟಕ್ಕೆ ರಿಯಾಯಿತಿ ಪರಹಾರ ನೀಡಬಹುದು.
 • ಬಾಗಿಲು ತೆರೆದಿಟ್ಟ ಗ್ಯಾರೇಜಿನಲ್ಲಿ ಬೆಲೆ ಬಾಳುವ ವಸ್ತುಗಳಿಂದ ತೋಟದ ಸಲಕರಣೆಗಳು, ಸಾಮಾನುಗಳು ಮತ್ತು ಸೈಕಲ್ ಮತ್ತು ಇತರೆ ವಸ್ತುಗಳು ಓಡಾಡುವವರ ಕಣ್ಣಿಗೆ ಕಾಣುಂತಿದ್ದರೆ ಇದು ಕಳ್ಳರಿಗೆ ಕಳ್ಳತನ ಮಾಡುವುದಕ್ಕೆ ಆಹ್ವಾನ ನೀಡುತ್ತದೆ. ಇದರಿಂದ ಕಳ್ಳರು ಮನೆಯೊಳಗೆ ಕೂಡ ಪ್ರವೇಶಿಸಬಹುದು.  ತೆರೆದಿರುವ ಗ್ಯಾರೇಜ್ ಬಾಗಿಲು ನಿಮ್ಮ ಕಣ್ಣಿಗೆ ಕಾಣುವಂತಿರಬೇಕು.  ಯಾರಾದರು ಒಳಗೆ ಪ್ರವೇಶಿಸುವುದು ಕಂಡುಬಂದಲ್ಲಿ ಗ್ಯಾರೇಜ್ ಬಾಗಿಲನ್ನು ಮುಚ್ಚಿರಿ, ವಾಹನ ಮತ್ತು ಮನೆಯ ಬೀಗದ ಕೈಗಳ ಮೇಲೆ ನಿಮ್ಮ ಹೆಸರು ಮತ್ತು ವಿಳಾಸದ ಮಾಹಿತಿಯನ್ನು ಹಾಕಬೇಡಿ.  ಬೀಗದ ಕೈಗಳನ್ನು ಕಳೆದುಕೊಂಡಾಗ ಅನಾನುಕೂಲವಾಗುವುದರ ಜೊತೆಗೆ ಇದು ಅನಿರೀಕ್ಷಿತ ಮತ್ತು ಅನಪೇಕ್ಷಿತ ವ್ಯಕ್ತಿಗಳು, ನೀವು ವಾಸಿಸುತ್ತಿರುವ ಸ್ಥಳದ ಮಾಹಿತಿ ಮತ್ತು ಬೀಗದ ಅನುಕೂಲತೆಯಿಂದ ಒಳಗೆ ಪ್ರವೇಶಿಸಬಹುದು.  ಇದರಿಂದಾಗುವ ನಷ್ಟ ನೀವು ಬೀಗ ಕಳೆದುಕೊಂಡಿರುವುದಕ್ಕಿಂತ ಹೆಚ್ಚು ನಷ್ಟ ತೆರಬೇಕಾಗುವುದು.  ನಿಮ್ಮನ್ನು ಗಮನಿಸುತ್ತಿರುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.  ಅವರು ಒಬ್ಬರು ಇದ್ದಲ್ಲಿ, ಅವರ ಜೊತೆ ಅನೇಕ ಜನರು ಇರುತ್ತಾರೆ.  ಒಬ್ಬರು ನಿಮ್ಮನ್ನು ಮನಗಾಣಿಸುವಂತೆ ಮಾಡುವುದರಿಂದ ನೀವು ವಸ್ತುಗಳಿಗೆ ಹಣವನ್ನು ನೀಡಬೇಕಾಗಿ ಬರಬಹುದು.  ಅವರು ಹೇಳುವುದು ಉಚಿತ ಮತ್ತು ನಿಜವೆಂದು ಅನಿಸಬಹುದು.  ಇದು ಒಂದು ರೀತಿಯಲ್ಲಿ ಮೋಸ ಮಾಡುವ ತಂತ್ರ.  ಇದರಲ್ಲಿ ಪ್ರವೀಣತೆ ಹೊಂದಿದವರು ನೋಡಲು ಪ್ರಮಾಣಿಕ ಮತ್ತು ವಿಧೇಯರಂತೆ ಕಾಣುತ್ತಾರೆ.  ಇಂತವರು ತಮ್ಮ ಅಪ್ರಾಮಾಣೀಕ ಜೀವನಕ್ಕಾಗಿ ಬೇರೆಯವರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.  ಇಂಥದಕ್ಕೆ ಗುರಿಯಾದ ಪಕ್ಷದಲ್ಲಿ ಸ್ಥಳೀಯ ಕಾನೂನು ವ್ಯವಸ್ಥೆಯನ್ನು ಸಂಪರ್ಕಿಸಿ.

 

ಅಪರಾಧಿಗಳಿಗೆ ಅವಕಾಶಗಳನ್ನು ಸೃಷ್ಟಿಸಬೇಡಿ:

ಅಪರಾಧವನ್ನು ತಡೆಗಟ್ಟುವುದರಿಂದ ಜೀವನ ಪೂರ್ತಿ ಆಗುವ ವಿಷಾದವನ್ನು ತಡೆಗಟ್ಟಬಹುದು.  ನೀವು ಮೋಟಾರು ವಾಹನ ಓಡಿಸುವಾಗ ಎಚ್ಚರಿಕೆಯಿಂದ ಹಾಗೂ ಸ್ವರಕ್ಷಣೆಯಿಂದ ಓಡಿಸಬೇಕು.  ವಾಹನ ಚಲಿಸುವಾಗ ನಿಮ್ಮನ್ನು ನೋಡದೆ ಬರುವ ಬೇರೆ ವಾಹನ ಚಾಲಕರ ಕಡೆಗೆ ನಿಮ್ಮ ಗಮನವಿರಲಿ.  ವಾಹನದಲ್ಲಿರುವಾಗ ನಿಮ್ಮ ಸೀಟಿನ ಬೆಲ್ಟ್ ಅನ್ನು  ಹಾಕಿಕೊಂಡಿರಿ.  ಮತ್ತು ಇತರರಿಗೂ ಹಾಕಿಕೊಳ್ಳುವಂತೆ ಸೂಚಿಸಿ.  ಹಳೆಯ ರಕ್ಷಣಾ ಸಂದೇಶಗಳು ಇಂದಿಗೂ ಸಹ ಅರ್ಥ ಪೂರ್ಣವಾಗಿದೆ.  ಸೀಟ್ ಬೆಲ್ಟ್ ಹಾಕಿಕೊಳ್ಳಿ ಜೀವ ಉಳಿಸಿಕೊಳ್ಳಿ ವಾಹನ ಅಪಘಾತ ತಡೆಗಟ್ಟಲು ಮತ್ತು ಆಗುವ ಗಾಯಗಳನ್ನು ಕಡೆಮೆಗೊಳಿಸಲು ನೀವು ಮತ್ತು ನಿಮ್ಮ ಕುಟುಂಬದವರು ನಿಮ್ಮ ಪ್ರಯಾಣಿಕರು ಸೀಟ್ ಬೆಲ್ಟ್ ಹಾಕಿಕೊಂಡಿರುವ ಬಗ್ಗೆ ಖಚಿತಪಡಿಸಿಕೊಳ್ಳಿ.  ಆಗಾಗ ಸಂಭವಿಸುವ ವಾಹನ ಅಪಘಾತಕ್ಕೆ ಗುರಿಯಾದವರು ಗಾಯಗೊಳ್ಳುತ್ತಾರೆ ಅಥವಾ ಸಾಯುತ್ತಾರೆ.  ವಾಹನದ ಹೊರಗೆ ಅಥವಾ ಒಳಗೆ ಅಪಘಾತದ ರಭಸಕ್ಕೆ ಸಿಲುಕಿ ಹಾಕಿಕೊಂಡು ನುಚ್ಚುನೂರಾಗುತ್ತಾರೆ.  ಪ್ರಮಾಣಿಕವಾಗಿ ಹೇಳವುದಾದರೆ ಸೀಟ್ ಬೆಲ್ಟ್ಗಳ ಬಳಕೆ ಸಾವು ಮತ್ತು ಬದುಕಿನ ಅಂತರವನ್ನು ನಿರ್ಧರಿಸುತ್ತವೆ. 

 

 

ಇತ್ತೀಚಿನ ನವೀಕರಣ​ : 30-10-2020 12:58 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080