ಅಭಿಪ್ರಾಯ / ಸಲಹೆಗಳು

ದೂರು ನೀಡುವ ವಿಧಾನ

ದೂರು ನೀಡುವ ಮೊದಲು ಗಮನಿಸಬೇಕಾದ ಅಂಶಗಳು.

 

ಎಲ್ಲಾ ದೂರುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು.  ಯಾವುದೇ ಪಕ್ಷ ಒಳಗೊಂಡಿದ್ದರೂ, ಪೊಲೀಸರ ಕಾರ್ಯನಿರ್ವಹಣೆಯ ಅಥವಾ ಅವರ ವರ್ತನೆಯ ಬಗ್ಗೆಗಿನ ದೂರು ಅಹಿತಕರವೆನಿಸಿದರೂ, ಎಲ್ಲಾ ದುರುಗಳನ್ನು ಕ್ರಮವಾದ, ನ್ಯಾಯವಾದ ರೀತಿಯಲ್ಲಿ ನಡೆಸುವುದು ಮುಖ್ಯವಾಗಿರುತ್ತದೆ.  ಕಾರ್ಯನಿರ್ವಹಣೆಯ ಕುಂದುಕೊರತೆಗಳನ್ನು ಎತ್ತಿಹೇಳುವುದರಿಂದ, ತಪ್ಪುಗಳನ್ನು ಸರಿಪಡಿಸಿ ಮುಂದೆ ತಿದ್ದುಕೊಳ್ಳಲು ನೆರವಾಗುತ್ತದೆ.

ಪೊಲೀಸ್ ಅಧಿಕಾರಿ ಅಥವಾ ಸಾರ್ವಜನಿಕರ ವಿರುದ್ಧದ ದೂರನ್ನು ನಡೆಸಲು ಸ್ಪಷ್ಟವಾದ ವಿಧಾನವಿದೆ.   ಪೊಲೀಸ್ ಅಧಿಕಾರಿಗಳ ವಿರುದ್ಧದ ದೂರನ್ನು ದೂರಿನ ಇಲಾಖೆಯಲ್ಲೂ ಮತ್ತು ಮೈಸೂರು ನಗರ ಸಾರ್ವಜನಿಕರ  ದೂರನ್ನು ಪೊಲೀಸ್ ಠಾಣೆಯ ಮುಖ್ಯಾಧಿಕಾರಿಯವರು ನೋಡಿಕೊಳ್ಳುತ್ತಾರೆ/ನಿರ್ವಹಿಸುತ್ತಾರೆ.  ಪೊಲೀಸ್ ನಿರೀಕ್ಷಕರ ವಿರುದ್ಧದ ಯಾವುದೇ ದೂರನ್ನು ಮೈಸುರು ನಗರ ಪೊಲೀಸ್ ಆಯುಕ್ತರೆದುರು ಧ್ವನಿ ಏರಿಸಬೇಕು.

 

ನಾನು ದೂರು ನೀಡಬಹುದೇ?

ಪೊಲೀಸ್ ಅಧಿಕಾರಿಯ ವರ್ತನೆ ತಪ್ಪು ಅಥವಾ ಅನ್ಯಾಯ ಎಂದು ಅನಿಸಿದರ, ದೂರು ಸಲ್ಲಿಸುವ ಹಕ್ಕನ್ನು ಹೊಂದಿರುತ್ತೀರಿ. 

ಮೊದಲು ಏನು ದೂರು ನೀಡಬೇಕೆಂದು ನಿರ್ಧರಿಸಿ, ಉದಾ: ನಿಮ್ಮೊಡನೆ ಅವರು ಕಟುವಾಗಿ ವರ್ತಿಸಿದರೆ, ಕಟುವಾಗಿದ್ದರೆ?  ಅವರು ಅಧಿಕ ಬಲ ಉಪಯೋಗಿಸಿದರೆ?  ಕಾನೂನು ಬಾಹಿರವಾಗಿ ದಸ್ತಗಿರಿ ಮಾಡಿದರೂ ? ನಿಮ್ಮ ಹಕ್ಕುಗಳ ದುರುಪಯೋಗ ನಡಿಯಿತೆ?  ಇಂತಹ ಎಲ್ಲಾ ಅಥವಾ ಕೆಲವು ಸಂದರ್ಭಗಳಲ್ಲಿ ನೀವು ದೂರು ಸಲ್ಲಿಸಲು ಅರ್ಹರು.

 

ಅಂಶಪಟ್ಟಿ(CHECKLIST):

ನನ್ನ ದೂರಿನಲ್ಲಿ ಏನು ಇರಬೇಕು?

  • ಯಾವಾಗ ಘಟನೆ ನಡೆಯಿತು?
  • ಹೇಗೆ ನಡೆಯಿತು?
  • ಏನು ಆಯ್ತು?
  • ಏನು ಹೇಳಿದರು?
  • ನೀವು ಮತ್ತು ಅಧಿಕಾರಿಗಳನ್ನು ಹೊರತುಪಡಿಸಿ, ಬೇರೆ ಯಾವುದಾದರು ಸಾಕ್ಷಿಗಳಿವೆಯೆ?
  • ಸಾಕ್ಷಿಗಳನ್ನು ಎಲ್ಲಿ ಸಂಪರ್ಕಿಸಬಹುದು.  
  • ಅಪಘಾತ ಅಥವಾ ಗಾಯಕ್ಕೆ ಸಂಬಂಧಿಸಿದಂತೆ ಏನು ಪುರಾವೆಗಳಿವೆ?

 

ದೂರನ್ನು ನಾನು ಹೇಗೆ ಮಾಡಬಹುದು?

ನೀವು ಯಾವುದೇ ಪೊಲೀಸ್ ಠಾಣೆಗೆ ಹೋದರೂ, ಅಲ್ಲಿ ಕೆಲಸದ ಮೇಲಿರುವ ಪೊಲೀಸ್ ಅಧಿಕಾರಿಯನ್ನು ಕಾಣಬಹುದು.  ಅವರು ಪ್ರಾಯಶ: ಸಬ್ಇನ್ಸ್ಪೆಕ್ಟರ್ ಆಗಿರುತ್ತಾರೆ.  ಅವರು, ನೀವು ಕೊಡಲು ಹೊರಟಿರುವ ದೂರಿಗೆ ಆಧಾರವಿದೆಯೇ ಎಂದು ತಿಳಿಸುವರು.  (ನೀವು ದೂರನ್ನು ವಕೀಲರು, ಯಾರಾದರೂ) ನಿಮ್ಮ ದೂರನ್ನು ವಕೀಲರೋ ಇಲ್ಲವೆ ಬೇರೆ ಯಾರಾದರೂ ಮೂಲಕನಾದರೂ ದೂರನ್ನು ನೀಡಬಹುದು.  ಉದಾ: ವಕೀಲರು, ಸ್ನೇಹಿತರು ಅಥವಾ ಅಕ್ಕಪಕ್ಕದವರು ಇವರ ಹತ್ತಿರ ನೀವು ಕೊಟ್ಟಿರುವ ಅಧಿಕಾರತ್ವದ ಪತ್ರ ಇರಬೇಕು.

 

ನನ್ನ ದೂರು ಏನಾಗಬಹುದು?

ಪೊಲೀಸ್ ಮೇಲೆ ನೀವು ದೂರನ್ನು ಸಲ್ಲಿಸಿದಲ್ಲಿ, ಅದನ್ನು ನೊಂದಾಯಿಸ ಬೇಕೋ ಬೇಡವೋ ಎಂಬುದನ್ನು ಅವರೇ ನಿರ್ಧರಿಸ ಬೇಕು.

 

ಕಡಿಮೆ ಗಂಭೀರದ ದೂರುಗಳು

 ವಿವರಣೆ ಅಥವಾ ಕ್ಷಮಾ ಪ್ರಾರ್ಥನದಿಂದ ನಿಮಗೆ ಸಮಾಧಾನವಾಗುವಂತಿದ್ದರೆ, ಅಂತಹ ದೂರುಗಳನ್ನು ಪೊಲೀಸರು ಅನೌಪಚಾರಿಕವಾಗಿ ಪರಿಹರಿಸಬಹುದು.

 

ಗಂಭೀರ ದೂರುಗಳು

ಅನೌಪಚಾರಿಕ ರೀತಿ ನಿಮಗೆ ಒಪ್ಪಿಗೆಯಿಲ್ಲದಿದ್ದಲ್ಲಿ ಅಥವಾ ಆರೋಪದ ಗಂಭೀರತೆ ತೀವ್ರಗೊಂಡಲ್ಲಿ ಅಂತಹ ದೂರುಗಳನ್ನು ಪೂರ್ಣವಾಗಿ ಹಿರಿಯ ಪೊಲೀಸ್ ಅಧಿಕಾರಿ ಪರಿಶೀಲಿಸುತ್ತಾರೆ.  ಹೆಚ್ಚಿನ ತೀವ್ರತೆವುಳ್ಳ ದೂರುಗಳು ದಾಖಲೆಯಾದ ಆದ ತಕ್ಷಣ, ಮೇಲ್ಪಟ್ಟ ಅಧಿಕಾರಿಗಳು ಅದನ್ನು ಪೊಲೀಸ್ ಆಯುಕ್ತರಿಗೆ ತಿಳಿಯಪಡಿಸಬೇಕು.

 

ಮೇಲ್ವಿಚಾರಕ ವಿಷಯ:  (ಅಧಿಕಾರಿ ವರ್ಗದ ಅಂಗೀಕೃತದಿಂದ ತನಿಖಾಧಿಕಾರಿ ನೇಮಕಗೊಳ್ಳುತ್ತಾರೆ).

ತನಿಖಾಧಿಕಾರಿಯ ನೇಮಕವನ್ನು ಅಧಿಕಾರಿ ವರ್ಗವು ಅಂಗೀಕರಿಸುತ್ತದೆ. ತನಿಖೆ ಹೇಗೆ ಮುಂದುವರಿಸಬೇಕೆಂದು ನಿರ್ಧರಿಸುತ್ತದೆ. ಎಲ್ಲಾ ಹೇಳಿಕೆ ಹಾಗೂ ಪುರಾವೆ ಸಾಕ್ಷಿಗಳನ್ನು ಓದುತ್ತದೆ. ಅಂತಿಮವಾಗಿ ವರದಿ ಪಡೆದ ಅದಿಕಾರಿ ವರ್ಗ ತನಿಖೆ ನೆಡೆದ ರೀತಿ ಸಮಾಧಾನಕರವೇ, ಇಲ್ಲವೇ ಎಂದು ತಿಳಿಸುತ್ತದೆ.

 

ತನಿಖೆಯ ನಂತರ ಏನಾಗುತ್ತದೆ?

ಮೈಸೂರು ಪೋಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಪೋಲೀಸ್ ಅಧಿಕಾರಿಗಳ ಮೇಲೆ ಅಪರಾಧದ ಅಪವಾದ ಹೇರಬೇಕೆ? ಎಂದು ನಿರ್ಧರಿಸುತ್ತಾರೆ.

ಪೋಲೀಸ್ ದೂರು ಅಧಿಕಾರ ವರ್ಗ, ಪೋಲೀಸ್ ಅಧಿಕಾರಿಯ ಮೇಲೆ ಅಯೋಗ್ಯ ವರ್ತನೆ ನಡಾವಳಿಯನ್ನು ಮುಂದುವರಿಸಬೇಕೇ ಎಂಬ ತಿರ್ಮಾನ ತೆಗೆದುಕೊಳ್ಳುತ್ತಾರೆ. ಅಧಿಕಾರಿಯಿಂದ ನಡೆತೆಯ ನಿಯಮದ ಕಾನೂನುಭಂಗ ಆಗಿದೆ ಎಂದು ಸಾಬೀತಾದಲ್ಲಿ ಮಾತ್ರ ಕಾರ್ಯ ಮುಂದುವರೆಯುವುದು.

ಅಸಭ್ಯ ವರ್ತನೆ ಇದ್ದಲ್ಲಿ, ಅದು ನಿಮಗೆ ಪೋಲೀಸರು ತಿಳಿಯಪಡಿಸುತ್ತಾರೆ. ನಿಮ್ಮನ್ನು ಭಾಗವಹಿಸುವುದಕ್ಕೆ ಹೇಳಬಹುದು. ನೀವು ಅತ್ಯಂತ ಮುಖ್ಯವಾದ ಸಾಕ್ಷಿ ಆಗಬಹುದು.

ಯಾವ ಪ್ರಕ್ರಿಯೆಯನ್ನು ತೆಗೆದುಕೊಳ್ಳದೆ,ಅಧಿಕಾರಿಗೆ ಔಪಚಾರಿಕವಾಗಿ ಎಚ್ಚರಿಕೆ ಅಥವಾ ತಿಳುವಳಿಕೆ ನೀಡಬಹುದು.

 

ನಾನು ಮುಂದೆ ಸಹಕರಿಸದಿದ್ದರೆ ಏನಾಗಬಹುದು?

 ನೀವು ಜ್ಞಾಪಕದಲ್ಲಿಡ ಬೇಕಾದ್ದದು ಏನೆಂದರೆ, ಸಹಕರಿಸಲು ವಿಫಲರಾದಲ್ಲಿ ಅಂದರೆ ಹೇಳಿಕೆ ನೀಡುವುದನ್ನು ನಿರಾಕರಿಸಿದಲ್ಲಿ, ನಿಮ್ಮ ದೂರನ್ನು ತನಿಖೆ ಮಾಡಲಾಗುವುದಿಲ್ಲ. ಮೈಸೂರು ಪೋಲೀಸ್ ಇಲಾಖೆ ಎಂತಹ ಸಂಸ್ಥೆಯೆಂದರೆ, ಸಾರ್ವಜನಿಕರಿಂದ ಪೋಲೀಸ್ ಅಧಿಕಾರಿಯ ನಡತೆಯ ಬಗ್ಗೆ ಏನಾದರೂ ಪಿರ್ಯಾದು  ಬಂದಲ್ಲಿ, ಅದನ್ನು ಕೂಲಂಕುಷವಾಗಿ ಎಲ್ಲಕ್ಕಿಂತ ಹೆಚ್ಚಾಗಿ ನ್ಯಾಯವಾದ ರೀತಿಯಲ್ಲಿ ವ್ಯವಹರಿಸಲಾಗುವುದು. ವರ್ಷದಲ್ಲಿ ನೂರಕ್ಕಿಂತ ಹೆಚ್ಚಾಗಿ ದೂರುಗಳನ್ನು ಅಧಿಕಾರವರ್ಗವು ಮೇಲ್ವಿಚಾರಣೆ ಮಾಡುತ್ತದೆ. ಸರಿಯಾದ ರೀತಿಯಲ್ಲಿ ತನಿಖೆ ಆಗುತ್ತಿದೆಯೇ ಎಂದು ಎಲ್ಲಾ ವರದಿಗಳನ್ನು ತಪಾಸಣೆ ಮಾಡಿ ಖಚಿತ ಪಡಿಸಿಕೊಳ್ಳಲಾಗುವುದು. ಅಧಿಕಾರವರ್ಗವು ಯಾವುದೇ ಪಕ್ಷವಹಿಸದೆ, ಮತ,ಲಿಂಗ ಬೇದ ನೋಡದೆ, ಸಮಾಜದಲ್ಲಿರುವ ವಿವಿಧತೆಯನ್ನು ಗಮನದಲ್ಲಿಟ್ಟು ಕೊಂಡು ಎಲ್ಲಾ ಸಂಗತಿ/ವಿಷಯವನ್ನು ನಿರ್ವಹಿಸುತ್ತದೆ.

 

ಇತ್ತೀಚಿನ ನವೀಕರಣ​ : 30-10-2020 12:57 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080