ಅಭಿಪ್ರಾಯ / ಸಲಹೆಗಳು

ಜಾಮೀನು ಹಾಗೂ ಜಾಮೀನು ರಹಿತ ಅಪರಾಧಗಳು

ಅಪರಾಧ ವಿಧಿವಿಧಾನಗಳ ನಿಯಮನುಸಾರಗಳ ಕೆಳಗೆ ಅಪರಾಧಗಳನ್ನು ಜಾಮೀನು ಹಾಗೂ ಜಾಮೀನೇತರ ಎಂದು ವಿಂಗಡಿಸಲಾಗಿದೆ.

 • ಜಾಮೀನು ಸಿಗುವಂತಹ ಅಪರಾಧಗಳಿಗೆ ಜಾಮೀನು ನೀಡಬಹುದೇ ಎಂಬುದು ತನಿಖಾ ಅಧಿಕಾರಿಗಳ ಬದ್ಧತೆಯ ಮೇರೆಗೆ ನೀಡಲಾಗುವುದು.
 • ಜಾಮೀನು ರಹಿತ ಅಪರಾಧಗಳಿಗೆ ಪೋಲೀಸರು ಜಾಮೀನು ನೀಡುವುದಿಲ್ಲ. ಇದರ ನಿರ್ಣಯ ನ್ಯಾಯದೀಶರು/ನ್ಯಾಯಧಿಕಾರಿ ತೆಗೆದುಕೊಳ್ಳುತ್ತಾರೆ.
 • ಜಾಮೀನು ಸಿಗುವಂತಹ ಅಪರಾಧಗಳಿದ್ದಲ್ಲಿ ಆರೋಪಿ ಬಂಧನದ ನಂತರ ಸೂಕ್ತವಾದ (ಸರಿಯಾದ) ಭದ್ರತೆ ನೀಡಿದ್ದಲ್ಲಿ ಹಾಗೂ ಬೇರೆ ಎಲ್ಲಾ ಶರತ್ತುಗಳನ್ನು ಪೂರೈಸಿದ್ದಲ್ಲ.
 • ಆರೋಪಿಯನ್ನು ಬಿಡುಗಡೆ ಮಾಡುವುದು ತನಿಖೆ ಅಧಿಕಾರಿಗಳಿಗೆ ಬಿಟ್ಟಿರತಕ್ಕದು.
 • ಜಾಮಿನು ರಹಿತ ಅಪರಾಧಗಳ ವಿಷಯದಲ್ಲಿ ಪರಿಶೀಲನಾ ಅಧಿಕಾರಿಯು ಆರೋಪಿಯನ್ನು ಬಂಧನದಿಂದ 24 ಗಂಟೆಗಳೂಳಗೆ ನ್ಯಾಯದೀಶರು/ನ್ಯಾಯಧಿಕಾರಿಯ ಮುಂದೆ ಹಾಜರುಪಡಿಸಬೇಕು. ಆ ಸಮಯದಲ್ಲಿ ಆರೋಪಿಯು ತಾನೇ ಆಗಲಿ ಅಥವಾ ತನ್ನ ಪರವಾಗಿ / ವಕೀಲರಿಂದಾಗಲಿ ಜಾಮೀನು ಕೋರಿಅರ್ಜಿ ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ.

ಬಂಧಿತ ವ್ಯಕ್ತಿಗಳ ಹಕ್ಕುಗಳು:

ಸವೋಚ್ಚ ನ್ಯಾಯಲಯ ನೀಡಿರುವ ಆದೇಶ ಹಾಗೂ ಮಾರ್ಗದರ್ಶನಗಳು.

 • ಬಂಧಿಸುವ ಹಾಗೂ ಬಂಧಿತನನ್ನು ಪ್ರಶ್ನಿಸುವ ಪೋಲೀಸ್ ಅಧಿಕಾರಿಯು ಸರಿಯಾದ, ಕಾಣುವಂತಹ ಹಾಗೂ ಸ್ಪಷ್ಡವಾದ ಹೆಸರು ಹಾಗೂ ಹುದ್ದೆಯ ಹೆಸರನ್ನು ನಮೂದಿಸಿರುವ ನುಡಿಗಟ್ಟನ್ನು ಹೊಂದಿರಬೇಕು.
 • ಬಂಧಿಸಲಿರುವ ಪೋಲೀಸ್ ಅಧಿಕಾರಿ ಬಂಧಿಸುವ ಸೂಚನಾ ಪತ್ರವನ್ನು ಸಜ್ಜುಗೂಳಿಸಿ ಅದಕ್ಕೆ ಕೂನೆ ಪಕ್ಷ ಒಬ್ಬ ಬಂಧಿತನ ಮನೆಯ ಸದಸ್ಯ ಅಥವಾ ಆ ಮೊಹಲ್ಲಾದ ಜವಬ್ದಾರಿಯುತ ವ್ಯಕ್ತಿಯು ಪ್ರಮಾಣ ಮಾಡಿ ಸಾಕ್ಷೀಯಾಗಿರಬೇಕು. ಅದು ಬಂಧಿತನಿಂದಲೂ ಪ್ರತಿ ಒಪ್ಪಿತವಾಗಿ ಅದರಲ್ಲಿ ಅಂದಿನ ತಾರೀಖು ಹಾಗೂ ಸಮಯ ನಮೂದಿಸಿರಬೇಕು.
 • ಬಂಧಿತ ವ್ಯಕ್ತಿಯು ಪೋಲೀಸ್ ಠಾಣೆಯಲ್ಲಿ ಅಥವಾ ಪ್ರಶ್ನಿಸುವ ಕೇಂದ್ರದಲ್ಲಿ ಅಥವಾ ಬಂಧಿಖಾನೆಯಲ್ಲಿದ್ದು, ಅವರೂಂದಿಗೆ ಅವರ ಸ್ನೇಹಿತ ಅಥವಾ ಸಂಬಂಧಿ ಅಥವಾ ಅವರ ಸೌಖ್ಯ ಗಮನಿಸುವ ವ್ಯಕ್ತಿಯು ಜೊತೆಯಲ್ಲಿರಬಹುದು. ಸಂಬಂಧಿಯಾದಲ್ಲಿ ಸಾದ್ಯವಾಗುವ ಸಮಯದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿರುವ ನಿರ್ಧಿಷ್ಟ ಸ್ಥಳ ತಿಳಿಸಬೇಕು. ಸೂಚನಾ ಪತ್ರದ ಸಾಕ್ಷೀ ಆರೋಪಿಯೇ ಆಗದೇ, ಬೇರೆ ಸ್ನೇಹಿತ ಅಥವಾ ಸಂಬಂಧಿ ಹೊರಗಿನ ಜಿಲ್ಲೆಯಲ್ಲಿದ್ದಲ್ಲಿ ಪೋಲೀಸರು ಆರೋಪಿಯ ಬಂಧಿತ ವೇಳೆ ,ಸ್ಥಳ ಹಾಗೂ ಬಂಧಿತನನ್ನು ಹಿಡಿದ ಸ್ಥಳ ಎಲ್ಲಾ ವಿವರಗಳನ್ನು  ನಗರ ನ್ಯಾಯ ಸಂಸ್ಥೆಯ ಅಥವಾ ಅದೇ ಮೊಹಲ್ಲಾದ ಪೋಲೀಸ್ ಠಾಣೆಯಿಂದ ದೂರವಾಣಿ ತಂತಿಯ ಮೂಲಕ ಬಂಧಿತವಾದ ಸಮಯದಿಂದ 8-12 ಗಂಟೆಯೊಳಗೆ ತಿಳಿಸಬೇಕು.
 • ಬಂಧಿತ ವ್ಯಕ್ತಿಯ ಹತ್ತಿರದವರಿಗೆ ತಾನು ಬಂಧಿತನಾಗಿದ್ದಾನೆಂದು ತಿಳಿಯ ಪಡಿಸಬಹುದೆಂಬ ಹಕ್ಕು ಬಂಧಿತನಿಗಿದೆಯೆಂದು ತಿಳಿಯಪಡಿಸಬೇಕು.
 • ಬಂಧನಕ್ಕೊಳಗಾದ ತಕ್ಷಣ ಬಂಧಿಸಲ್ಪಟ್ಟ ಸ್ಥಳದಲ್ಲಿ ವ್ಯಕ್ತಿಯು ಬಂಧಿತನಾಗಿದ್ದಾನೆಂದು ದಿನಚರಿಯಲ್ಲಿ ದಾಖಲಿಸಿ ಅದರೂಂದಿಗೆ ಬಂಧಿತ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿಸಿರುವ ಬಂಧಿತನ ಸಂಬಂಧಿ/ಸ್ನೇಹಿತನ ಹೆಸರು ನಮೂದಿಸಬೇಕು.
 • ಬಂಧಿತ ಕೋರಿದ್ದಲ್ಲಿ, ಬಂಧಿತ ಸಮಯದಲ್ಲಿ ತನ್ನ ಶರೀರದ ಮೇಲೆ ದೊಡ್ಡ/ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಹೇಳಿರುವ ಬಗ್ಗೆ ದಾಖಲಿಸಬೇಕು.

ಇತ್ತೀಚಿನ ನವೀಕರಣ​ : 20-10-2020 05:31 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080