ಅಭಿಪ್ರಾಯ / ಸಲಹೆಗಳು

ಕಾರ್ಯಕ್ರಮಗಳು

ಕ್ರ.ಸಂ. ಕಾರ್ಯ ಕ್ರಮದ ಮಾಹಿತಿ ಕಾರ್ಯಕ್ರಮ ಚಿತ್ರ/ವಿವರ
01 ಕೋವೀಡ್-೧೯ರ ಸಂಬಂಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಬಗ್ಗೆ.     ಒತ್ತಿರಿ
 02  ಮೈಸೂರು ನಗರ ಪೊಲೀಸ್ ಘಟಕದ ಡ್ರಗ್ ಡಿಸ್ಪೋಸಲ್ ಕಮಿಟಿಯ ಮುಖಾಂತರ ನಗರದ ಪೊಲೀಸ್ ಠಾಣೆಗಳಲ್ಲಿ ಅಮಾನತ್ತುಪಡಿಸಿಕೊಂಡಿರುವ ಮಾದಕ ದ್ರವ್ಯಗಳನ್ನು ದಿನಾಂಕ: 26.06.2021 ರಂದು ನಾಶಪಡಿಸಿರುವ ಬಗ್ಗೆ.

 ಒತ್ತಿರಿ 

 ವಿಡೀಯೊಗಾಗಿ ಒತ್ತಿರಿ

03 ಮೈಸೂರು ದಸರಾ ಮಹೋತ್ಸದ ಅಂಗವಾಗಿ ಈ ದಿನ ಮೈಸೂರು ನಗರ ಪೊಲೀಸರಿಂದ ಫಿರಂಗಿ ತಾಲೀಮ್ ನಡೆಸಲಾಯಿತು.

ಒತ್ತಿರಿ 

 

04 ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ-2021 ಮಹೋತ್ಸವಕ್ಕೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಚಾಲನೆ ನೀಡಿದರು.

ಒತ್ತಿರಿ

05 ಮೈಸೂರು ದಸರಾ ಮಹೋತ್ಸವ-2021 ರ ಭಾಗವಾಗಿ ಅರಮನೆಯ ಆವರಣದಲ್ಲಿ ಪೊಲೀಸ್ ಬ್ಯಾಂಡ್ ಕಾರ್ಯಕ್ರಮವನ್ನು ದಿನಾಂಕ: 11.10.2021 ರ ಸಂಜೆ 06.30ಕ್ಕೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪೊಲೀಸ್ ಆಯುಕ್ತರಾದ ಡಾ: ಚಂದ್ರಗುಪ್ತ ಐ.ಪಿ.ಎಸ್. ರವರು ಮತ್ತು ಶ್ರಿ ಪ್ರದೀಪ್ ಗುಂಟೆ ಐ.ಪಿ.ಎಸ್. ರವರು ಭಾಗವಹಿಸಿದ್ದರು.

ಒತ್ತಿರಿ

06

ಮೈಸೂರು ನಗರ ಪೊಲೀಸ್ ರವರಿಂದ ಅಪರಾಧ ತಡೆ ಮಾಸಾಚರಣೆ – 2021ರ ಅಂಗವಾಗಿ ಅಪರಾಧಗಳ ಕುರಿತು ಅರಿವು ಮೂಡಿಸುವ ಗೋಡೆ ಕಲಾಕೃತಿಗಳ ಅನಾವರಣ ಮತ್ತು ಸೈಕಲ್ ಜಾಥಾ ಕಾರ್ಯಕ್ರಮವನ್ನು  ಡಾ: ಚಂದ್ರಗುಪ್ತ ಐ.ಪಿ.ಎಸ್. ಪೊಲೀಸ್ ಆಯುಕ್ತರು, ಮೈಸೂರು ನಗರ ರವರು  ಉದ್ಘಾಟಿಸಿದರು. 

ಒತ್ತಿರಿ

07

ಮೈಸೂರು ನಗರ ಪೊಲೀಸ್ ಅಧಿಕಾರಿಗಳಿಗೆ ಒಂದು ದಿನ ಮಾದಕ ವಸ್ತುವಿನ ನಿಯಂತ್ರಣ ಕುರಿತು ಕಾರ್ಯಗಾರವನ್ನು  ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ಕರ್ನಾಟಕ, (ಪ್ರಾಯೋಜಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ-ನವದೆಹಲಿ) ರವರಿಂದ ಅಯೋಜಿಸಲಾಗಿತ್ತು.  ಈ ಕಾರ್ಯಗಾರವನ್ನು ಶ್ರೀ ಪ್ರದೀಪ್ ಗುಂಟಿ IPS, ಡಿಸಿಪಿ ಕಾನೂನು & ಸುವಸ್ಥೆರವರು ಉದ್ಘಾಟಿಸಿದರು ಮತ್ತು ಈ ಕಾರ್ಯಗಾರಕ್ಕೆ ಭಾಗವಹಿಸಿದ ಅಧಿಕಾರಿಗಳಿಗೆ ಮಾನ್ಯ ಪೊಲೀಸ್ ಆಯುಕ್ತರು  ಶ್ರೀ ಬಿ.ರಮೇಶ್ IPS ರವರು ಪ್ರಮಾಣ ಪತ್ರ ವಿತರಿಸಿದರು. 

16.12.2022 
08

ಮೈಸೂರು ನಗರ ಕೃಷ್ಣರಾಜ ವಿಭಾಗದಿಂದ ಈ ದಿನ ಅಪರಾಧ ತಡೆ ಮಾಸಚಾರಣೆ ಅಂಗವಾಗಿ ಜ್ಞಾನ ಗಂಗಾ ಶಾಲೆಯ ಮಕ್ಕಳು ಮತ್ತು ಆಡಳಿತ ಮಂಡಳಿಯೊಂದಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಅಪರಾಧ ತಡೆಯುವ ಮುನ್ನೆಚ್ಚರಿಕೆಯ ಫಲಕಗಳೊಂದಿಗೆ ಪಥ ಸಂಚಲನ ನಡೆಸಲಾಯಿತು.

20.12.2022
09

ಮೈಸೂರು ನಗರ ಪೊಲೀಸರಿಂದ ಅಪರಾಧ ತಡೆ ಮಾಸಾಚರಣೆ-2022 ರ ಜನಜಾಗೃತಿ ಜಾಥವನ್ನು ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಎನ್. IPS ರವರು ಉದ್ಘಾಟಿಸಿದರು. ಶ್ರೀಮತಿ ಗೀತಾ IPS ಡಿಸಿಪಿ ಕ್ರೈಂ & ಟ್ರಾಫಿಕ್, ಪೊಲೀಸ್ ಅಧಿಕಾರಿಗಳು & ಸಿಬ್ಬಂದಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಅಪರಾಧ ಜಾಗೃತಿಯ ಫಲಕ ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ಮಾಡಿದರು.

21.12.2022
10

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥವಾಗಿ ಈ ದಿನ ಪೂರ್ವಾಹ್ನ11.00 ಗಂಟೆಗೆ  ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPS ರವರ ನೇತೃತ್ವದಲ್ಲಿ ಮೌನ ಆಚರಿಸಲಾಯಿತು. ಈ ಆಚರಣೆಯಲ್ಲಿ ಡಿಸಿಪಿ ಕಾ &ಸು ಎಂ. ಮುತ್ತರಾಜ್ IPS, ಡಿಸಿಪಿ ಅಪರಾಧ & ಸಂಚಾರ, ಶ್ರೀಮತಿ ಗೀತಾ ಎಂ.ಎಸ್ IPS ಮತ್ತು ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

30.01.2023
11

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPS ರವರು ನಗರದ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.  ಈ ಕಾರ್ಯಕ್ರಮಕ್ಕೆ ಶ್ರೀ ಮುತ್ತುರಾಜು ಎಂ.  IPS ಕಾ&ಸು, ಶ್ರೀಮತಿ ಜಾಹ್ನವಿ KSPS ಕ್ರೈಂ & ಸಂಚಾರ & ಮುಖ್ಯ ಅತಿಥಿಗಳಾಗಿ ಶ್ರೀಮತಿ ದಿವ್ಯಾ ಶ್ರೀ ಕಾರಾಗೃಹ, ಅಧೀಕ್ಷಕರು ಹಾಜರಿದ್ದರು.

08.03.2023
12

ಈ ದಿನ ಮೈಸೂರು ನಗರ ಸಂಚಾರ ಪೊಲೀಸ್ ರಿಂದ ಸಂಚಾರಿ ನಿಯಮಗಳ ಪಾಲನೆ ಮತ್ತು ಜಾಗೃತಿಗಾಗಿ  ಬೈಕ್  ಜಾಥ ವನ್ನು ಹಮ್ಮಿಕೊಳ್ಳಲಾಗಿದ್ದು,  ಬೆಳಿಗ್ಗೆ 10.00ಗಂಟೆಗೆ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ  ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPSರವರು ಉದ್ಘಾಟಿಸಿದರು.   ಈ ಜಾಥದಲ್ಲಿ ಉಪಪೊಲೀಸ್ ಆಯುಕ್ತರುಗಳಾದ ಶ್ರೀ ಮುತ್ತುರಾಜು.ಎಂ.  IPS ಕಾನೂನು ಮತ್ತುಸುವ್ಯವಸ್ಥೆ, ಶ್ರೀಮತಿ ಜಾಹ್ನವಿ .ಎಸ್. KSPSಅಪರಾಧ & ಸಂಚಾರರವರು ಭಾಗವಹಿಸಿದ್ದರು.  

25.07.2023
13

ಮೈಸೂರು ನಗರ ಪೊಲೀಸ್ ಆಯುಕ್ತರ ಕಛೇರಿಯಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ  IPS ರವರ ನೇತೃತ್ವದಲ್ಲಿ ಆಚರಿಸಲಾಯಿತು. ಈ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಆಚರಣೆಯಲ್ಲಿ  ಶ್ರೀ ಮುತ್ತುರಾಜು ಎಂ IPS ಡಿ.ಸಿ.ಪಿ ಕಾನೂನು & ಸುವ್ಯವಸ್ಥೆ, ಶ್ರೀಮತಿ ಜಾಹ್ನವಿ KSPS, ಡಿ.ಸಿ.ಪಿ ಅಪರಾಧ & ಸಂಚಾರ, ಶ್ರೀ ಮಾರುತಿ KSPS ಡಿ.ಸಿ.ಪಿ ಸಶಸ್ತ್ರದಳರವರು ಮತ್ತು  ಅಧಿಕಾರಿ & ಸಿಬ್ಬಂದಿಗಳು ಭಾಗವಹಿಸಿರುತ್ತಾರೆ. 

15.08.2023 
14

ಮೈಸೂರು ನಗರ ಬನ್ನಿಮಂಟಪ ಪಂಜಿನ ಕವಾಯಿತು ಮೈದಾನದಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಡಾ: ಹೆಚ್.ಸಿ. ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವರವರ  ನೇತೃತ್ವದಲ್ಲಿ ಆಚರಿಸಲಾಯಿತು. ಈ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಆಚರಣೆಯಲ್ಲಿ ಅಧಿಕಾರಿ & ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.

15.08.2023
15.

ಈ ದಿನ ಮೈಸೂರು ನಗರ ಪೊಲೀಸ್ ಆಯುಕ್ತರವರ ಕಛೇರಿ ಆವರಣದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತರಾದ ಶ್ರೀ ಬಿ ರಮೇಶ್ I.P.S., ನಗರದ ಕಾನೂನು & ಸುವ್ಯವಸ್ಥೆ ಉಪಪೊಲೀಸ್ ಆಯಕ್ತರಾದ ಶ್ರೀ ಮುತ್ತುರಾಜು ಎಂ I.P.S., ಮತ್ತು ಅಪರಾಧ & ಸಂಚಾರ ಉಪಪೊಲೀಸ್ ಆಯುಕ್ತರಾದ ಶ್ರೀಮತಿ ಜಾಹ್ನವಿ ಎಸ್ ರವರು ಭಾಗವಹಿಸಿದ್ದರು.

02.10.2023 
16.  

ಈ ದಿನ ಮೈಸೂರು ಗಾಂಧಿ ಚೌಕದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮೈಸೂರು ನಗರದ ಮೇಯರ್ ರಾದ ಶ್ರೀ. ಶಿವಕಮಾರ್, ಕೆ.ಆರ್. ಕ್ಷೇತ್ರದ ಶಾಸಕರಾದ ಶ್ರೀ. ಶ್ರೀವತ್ಸಾ, ಜಿಲ್ಲಾಧಿಕಾರಿಗಳಾದ ಡಾ: ರಾಜೇಂದ್ರ ಕೆ.ವಿ. I.A.S., ಪೊಲೀಸ್ ಆಯುಕ್ತರಾದ ಶ್ರೀ ಬಿ ರಮೇಶ್ I.P.S., ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಸೀಮಾ ಲಾಟ್ಕರ್ I.P.S., ರವರು ಭಾಗವಹಿಸಿದ್ದರು.

02.10.2023 

17. ದಿನಾಂಕ: 22.11.2023ರ ಸಂಜೆ 6 ಗಂಟೆಗೆ ವಸ್ತು ಪ್ರದರ್ಶನ ಆವರಣದಲ್ಲಿ ಪೊಲೀಸ್ ಸ್ಟಾಲ್  ಅನ್ನು  ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPS ರವರು ಉದ್ಘಾಟಿಸಿದರು.  ಮುಖ್ಯ ಅತಿಥಿಗಳಾಗಿ ಶ್ರೀ ರಾಜೇಂದ್ರ IAS ಮೈಸೂರು ಜಿಲ್ಲಾಧಿಕಾರಿಗಳು ಮತ್ತು ಉಪಪೊಲೀಸ್ ಆಯುಕ್ತರುಗಳಾದ  ಶ್ರೀ ಮುತ್ತುರಾಜು  ಎಂ IPS, ಕಾನೂನು & ಸುವ್ಯವಸ್ಥೆ, ಶ್ರೀಮತಿ ಜಾಹ್ನವಿ ಎಸ್ ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ, ಶ್ರೀ ಮಾರುತಿ ನಗರ ಸಶಸ್ತ್ರ ದಳ ಮತ್ತು ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

22.11.2023

18 ಮೈಸೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2023ರ ಉದ್ಘಾಟನೆಯನ್ನು ಡಾ: ರಾಜೇಂದ್ರ ಕುಮಾರ್ ಕೆ.ವಿ. IAS ರವರು ಉದ್ಘಾಟಿಸಿದರು, ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPS ರವರು, ಉಪಪೊಲೀಸ್ ಆಯುಕ್ತರುಗಳಾದ ಶ್ರೀ ಮುತ್ತುರಾಜು ಎಂ IPS, ಶ್ರೀಮತಿ ಜಾಹ್ನವಿ ಎಸ್, ಶ್ರೀ ಮಾರುತಿ & ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗು ಕ್ರೀಡಾಪಟುಗಳು ಉಪಸ್ಥಿತರಿದ್ದರು 27.11.2023
19 ಮೈಸೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2023ರ ಸಮಾರೋಪ ಸಮಾರಂಭದಲ್ಲಿ ಡಾ: ಜಿ.ಸಿ.ಪ್ರಕಾಶ್ IASರವರು ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPSರವರು, ಉಪಪೊಲೀಸ್ ಆಯುಕ್ತರುಗಳಾದ ಶ್ರೀ ಮುತ್ತುರಾಜು ಎಂ IPS,ಶ್ರೀಮತಿ ಜಾಹ್ನವಿ ಎಸ್,ಶ್ರೀ ಮಾರುತಿ &ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು 29.11.2023
20 ಅಪರಾಧ ಮಾಸಾಚರಣೆ ಕಾರ್ಯಕ್ರಮವನ್ನು  ಈ ದಿನ ಅರಮನೆಯ  ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಡಾ: ರಾಜೇಂದ್ರ IAS ಜಿಲ್ಲಾಧಿಕಾರಿಗಳು ರವರು ಉದ್ಘಾಟಿಸಿದರು. & ಮುಖ್ಯ ಅಥಿತಿಯಾಗಿ ಏಕಲವ್ಯ ಪ್ರಶಸ್ತಿ ವಿಜೇತೆ ರೀನಾ ಜಾರ್ಜ್  ರವರು ಆಗಮಿಸಿದ್ದರು.  ಶ್ರೀ ರಮೇಶ್ ಬಿ IPS ಪೊಲೀಸ್ ಆಯುಕ್ತರು  & ಡಿಸಿಪಿ ಗಳಾದ ಶ್ರೀ ಮುತ್ತುರಾಜು ಎಂ IPS, ಕಾ&ಸು ರವರು, ಶ್ರೀಮತಿ ಜಾಹ್ನವಿ.S ಕ್ರೈಂ & ಸಂಚಾರ, ಶ್ರೀ ಮಾರುತಿ CAR &ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು  ಈ ಸಭೆಯಲ್ಲಿ ಶಾಲಾ ಮಕ್ಕಳು, ಕಾಲೇಜ್ ವಿದ್ಯಾರ್ಥಿಗಳು & ಪೊಲೀಸ್ ಸಿಬ್ಬಂದಿಗಳಿಂದ ಜಾಥನಾಡಿಸಲಾಯಿತು. 11.12.2023
21 ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಈ ದಿನ ಶ್ರೀ ರಮೇಶ್ ಬಿ IPS ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರುಗಳಾದ  ಶ್ರೀ ಮುತ್ತುರಾಜು.M IPS & ಶ್ರೀಮತಿ ಜಾಹ್ನವಿ & ಸಂಬಂಧಪಟ್ಟ ಅಧಿಕಾರಿಗಳು ದೇವರಾಜ ಉಪವಿಭಾಗದ ಉದಯಗಿರಿ ಠಾಣಾ ಸರಹದ್ದಿನಲ್ಲಿರುವ ಶಕ್ತಿನಗರ ಪಾರ್ಕ್ ನಲ್ಲಿ  ಸಾರ್ವಜನಿಕರು & ಮೊಹಲ್ಲಾ ನಿವಾಸಿಗಳೊಂದಿಗೆ ಸಭೆ ನಡೆಸಿ ಕಾನೂನಿನ ಅರಿವಿನ ಬಗ್ಗೆ ತಿಳುವಳಿಕೆ ನೀಡಿ & ಸಾರ್ವಜನಿಕರ ಕುಂದು ಕೊರತೆ ಬಗ್ಗೆ ಚರ್ಚಿಸಲಾಯಿತು. 15.12.2023
22

ಈ ದಿನ ಬೆಳಗ್ಗೆ 10.00 ಗಂಟೆಗೆ ಕೋಟೆ ಆಂಜನೇಯ ದೇವಸ್ಥಾನದ ಬಳಿ ಮಹಿಳೆಯರ ಸುರಕ್ಷತೆಗಾಗಿ  " "ಚಾಮುಂಡಿ ಮಹಿಳಾ ಸುರಕ್ಷಾ ಪಡೆ"" ವಾಹನಗಳ ಉದ್ಘಾಟನೆಯನ್ನು ಶ್ರೀ ರಮೇಶ್ ಬಿ IPS, ಪೊಲೀಸ್ ಆಯುಕ್ತರವರು ನೆರವೇರಿಸಿದರು. ಉಪಪೊಲೀಸ್ ಆಯುಕ್ತರಾದ  ಶ್ರೀಮತಿ ಜಾಹ್ನವಿ ಎಸ್, ಶ್ರೀ ಮಾರುತಿ ರವರುಗಳು ಉಪಸ್ಥಿತರಿದ್ದರು.  ಮತ್ತು  ಮೈಸೂರು ನಗರದ ಎಲ್ಲಾ ಘಟಕಗಳ ಎ.ಸಿ.ಪಿ ., ಪಿಐ & ಎಲ್ಲಾ ಮಹಿಳಾ ಸಿಬ್ಬಂದಿರವರು & ಶಾಲಾ ಹೆಣ್ಣು ಮಕ್ಕಳು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

06.01.2024
23

ಮೈಸೂರು ನಗರ ಸಂಚಾರ ಪೊಲೀಸರಿಂದ ಈ ದಿನ 35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2024ರ ಅಂಗವಾಗಿ ಮಕ್ಕಳ ಸಂಚಾರ ಉದ್ಯಾನವನದಲ್ಲಿ  ಶಾಲಾ ಮಕ್ಕಳಿಗೆ ಸಂಚಾರ ನಿಯಮಗಳ ಅರಿವು ಮತ್ತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.  ಈ ಚಿತ್ರಕಲೆ ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನವನ್ನು  ಶ್ರೀಮತಿ ಜಾಹ್ನವಿ ಎಸ್, ಉಪಪೊಲೀಸ್ ಆಯುಕ್ತರು, ಅಪರಾಧ & ಸಂಚಾರ ರವರು ನೀಡಿದರು.  ಮತ್ತು ಎಲ್ಲಾ ಸಂಚಾರ ಪೊಲೀಸ್ ನಿರೀಕ್ಷಕರುಗಳು & ಸಿಬ್ಬಂದಿಗಳು ಉಪಸ್ಥಿತರಿದ್ದರು. 

20.01.2024 
24

ಮೈಸೂರು ನಗರ ಪೊಲೀಸ್‌ನ “ಕನ್ಸರ್ವೇಟಿವ್ ಹೆರಿಟೇಜ್ ಬ್ಯಾಂಡ್ ಹೌಸ್” ಹಸ್ತಾಂತರ ಸಮಾರಂಭವನ್ನು ಈ ದಿನ ಮಾಢಲಾಯಿತು. ಮುಖ್ಯ ಅತಿಥಿ ಶ್ರೀ. ಎಸ್ ತಾಳಿಕೇರಪ್ಪ, ಎಂ.ಡಿ, ಬ್ಯಾಂಕ್ ನೋಟ್ ಪೇಪರ್ ಮಿಲ್, ಇಂಡಿಯಾ, ಮೈಸೂರು ಅವರು ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ. ಐಪಿಎಸ್ ಅವರಿಗೆ ಹಸ್ತಾಂತರಿಸಿದರು. ಶ್ರೀ ದೇವರಾಜು ಎ, ಕೆಎಎಸ್ ಆಯುಕ್ತರು, ಪುರಾತತ್ವ , ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮತ್ತು ನಗರದ ಪೊಲೀಸ್ ಹಿರಿಯ ಅಧಿಕಾರಿಗಳು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

25.01.2024
25

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥವಾಗಿ ಈ ದಿನ ಪೂರ್ವಾಹ್ನ 11.00ಗಂಟೆಗೆ ಪೊಲೀಸ್ ಆಯುಕ್ತರ ಕಛೇರಿಯ ಆವರಣದಲ್ಲಿ ಶ್ರೀ ರಮೇಶ್ ಬಿ IPS ಪೊಲೀಸ್ ಆಯುಕ್ತರವರ ನೇತೃತ್ವದಲ್ಲಿ ಮೌನಚಾರಣೆಯನ್ನು ಆಚರಿಸಲಾಯಿತು.  ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು & ಸಿಬ್ಬಂದಿಗಳು ಭಾಗವಹಿಸಿದ್ದರು.

30.01.2024

 

ಇತ್ತೀಚಿನ ನವೀಕರಣ​ : 30-01-2024 12:13 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080