ಅಭಿಪ್ರಾಯ / ಸಲಹೆಗಳು

ಪೊಲೀಸ್ ನ್ಯೂ ಬೀಟ್ ಸಿಸ್ಟಂ

ಕರ್ನಾಟಕ ರಾಜ್ಯ ಪೊಲೀಸರಿಂದ ಹೋಸ ಬೀಟ್ ವ್ಯವಸ್ಥೆ

ಕರ್ನಾಟಕ ರಾಜ್ಯ ಪೊಲೀಸರು ಹೊಸ ಬೀಟ್‌ ವ್ಯವಸ್ಥೆಯನ್ನು ದಿನಾಂಕ: 01ನೇ ಏಪ್ರೀಲ್ 2017 ನೇ ಸಾಲಿನಿಂದ ರಾಜ್ಯದಲ್ಲಿ ಸಮುದಾಯ ಪೊಲೀಸ್ ವ್ಯವಸ್ಥೆ ಹಾಗೂ ನಾಗರೀಕ ಕೇಂದ್ರಿತ ಪೊಲೀಸ್ ವ್ಯವಸ್ಥೆಯನ್ನು  ತಳ ಮಟ್ಟದಲ್ಲಿ ಬಲಪಡಿಸುವ ಉದ್ದೇಶದಿಂದ ಜಾರಿಗೆ ತರಲಾಯಿತು. ಹೋಸ ಬೀಟ್ ವ್ಯವಸ್ಥೆಯ ಪ್ರಮುಖ ಅಂಶಗಳು ಈ ಕೆಳಕಂಡಂತೆ ಇರುತ್ತದೆ.

 

ಪೊಲೀಸರ ಅಧಿಕಾರವನ್ನು ಉತ್ತಮಗೊಳಿಸುವುದು.

ಎಲ್ಲಾ ಪೊಲೀಸ್‌ ಅಧಿಕಾರಿಗಳು ಅಂದರೆ ಪೊಲೀಸ್‌ ಆಯುಕ್ತರಿಂದ ಹಿಡಿದು ಪೊಲೀಸ್‌ ನೀರೀಕ್ಷಕರು/ಉಪ ಪೊಲೀಸ್‌ ನಿರೀಕ್ಷಕರವರೆಗೆ ಎಲ್ಲರೂ ತಮ್ಮ ನಿರ್ದಿಷ್ಠ ಪ್ರಾದೇಶಿಕ ವ್ಯಾಪ್ತಿಯ ಪೊಲೀಸ್ಸಿಂಗ್‌ ನಲ್ಲಿ ಜವಾಬ್ದಾರರಾಗಿರುತ್ತಾರೆ. ಇಲಾಖೆಯಲ್ಲಿ 90%ರ ಹೆಚ್ಚು ಬಲವಿರುವ ಪೊಲೀಸ್‌ ಹೆಡ್‌ಕಾನ್ಸ್ಟೇಬಲ್ ಹಾಗೂ ಪೊಲೀಸ್‌ ಕಾನ್ಸ್ಟೇಬಲ್‌ ರವರಿಗೆ ಈ ಹಿಂದಿನ ವ್ಯವಸ್ಥೆಯಲ್ಲಿ ಪ್ರಾದೇಶಿಕ ವ್ಯಾಪ್ತಿಯ ಬಗ್ಗೆ ಅಧಿಕಾರ ನೀಡಿಲ್ಲದೆ ಇದ್ದು, ಆದರೆ ಈ ಹೊಸ ಬೀಟ್‌ ವ್ಯವಸ್ಥೆಯಲ್ಲಿ ಪ್ರತಿ ಹೆಡ್‌ಕಾನ್ಸ್ಟೇಬಲ್/ ಪೊಲೀಸ್‌ ಕಾನ್ಸ್ಟೇಬಲ್‌ ರವರಿಗೆ ನಿರ್ದಿಷ್ಠ ವ್ಯಾಪ್ತಿಯನ್ನು ವಹಿಸಿ ಸಂಪೂರ್ಣ ಜವಾಬ್ದಾರಿಯನ್ನು ನೀಡಿ ಅವರನ್ನು ಸದರಿ ಬೀಟ್‌ ನ “ಬೀಟ್‌ ಪೊಲೀಸ್‌ ಅಧಿಕಾರಿ”ಯಾಗಿ ನಿಯೋಜಿಸಿರುತ್ತೆ.  

 

ಪೊಲೀಸ್ಸಿಂಗ್‌ನ ವಿಕೇಂದ್ರಿಕರಣ

ಪೊಲೀಸ್ ಠಾಣೆಗಳು ಪ್ರಸ್ತುತ ರಾಜ್ಯ ಪೊಲೀಸ್‌ನ  ಒಂದು ಚಿಕ್ಕ ಆಡಳಿತಾತ್ಮಕ, ಕ್ರಿಯಾತ್ಮಕ ಮತ್ತು ಭೌಗೋಳಿಕ ಘಟಕವಾಗಿದ್ದು, ಆದರೂ ಸಹ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪೊಲೀಸರು ಕರ್ತವ್ಯವನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಲು ಠಾಣಾ ಮಟ್ಟದಲ್ಲಿ ಬೌಗೋಳಿಕ ವಿಂಗಡನೆಯ ಅವಶ್ಯಕತೆ ತೀವ್ರವಾಗಿ ಇದ್ದು. ಈ ಹಿಂದಿನ ಬೀಟ್‌ ವ್ಯವಸ್ಥೆಯಲ್ಲಿ ಬೀಟ್‌ ವಿಂಗಡನೆ ಇದ್ದರೂ ಸಹ ಪೊಲೀಸ್‌ ಹೆಡ್‌ಕಾನ್ಸ್ಟೇಬಲ್/ ಪೊಲೀಸ್‌ ಕಾನ್ಸ್ಟೇಬಲ್‌ ಗಳಿಗೆ ಪ್ರತ್ಯೆಕವಾಗಿ ಬೀಟ್‌ ನಿಯೋಜಿಸಿ ಜವಾಬ್ದಾರಿಯನ್ನು ನೀಡಿರಲಿಲ್ಲಾ. ಪ್ರಸ್ತುತ ಹೊಸ ಬೀಟ್‌ ವ್ಯವಸ್ಥೆಯಲ್ಲಿ ಪೊಲೀಸ್‌ ಹೆಡ್‌ಕಾನ್ಸ್ಟೇಬಲ್ ಹಾಗೂ ಪೊಲೀಸ್‌ ಕಾನ್ಸ್ಟೇಬಲ್‌ ಗಳಿಗೆ ಪ್ರತ್ಯೇಕ ಬೀಟ್ಟನ್ನು ಹಂಚಿಕೆ ಮಾಡಿ ನಿಯೋಜಿಸಿ, ಪೂರ್ಣ ಅಧಿಕಾರವನ್ನು ನೀಡಿರುತ್ತೆ. ಆದ್ದರಿಂದ ಸದರಿ ಬೀಟ್‌ಗಳು ಇಲಾಖೆಯ ಒಂದು ಅತಿ ಚಿಕ್ಕ ಠಾಣಾವಾರು ಬೌಗೋಳಿಕ ಘಟಕವಾಗಿರುತ್ತದೆ.  

 

ಸಮುದಾಯ ಪೊಲೀಸ್ಸಿಂಗ್‌ ಅನ್ನು ಬಲಪಡಿಸುವುದು.

 ಪೊಲೀಸ್‌ ಹೆಡ್‌ಕಾನ್ಸ್ಟೇಬಲ್ ಹಾಗೂ ಪೊಲೀಸ್‌ ಕಾನ್ಸ್ಟೇಬಲ್‌ಗಳು ನಿರ್ದಿಷ್ಟವಾಗಿ ಪ್ರತಿ ಬೀಟಿನ ಉಸ್ತುವಾರಿಯನ್ನು ವಹಿಸಿರುವುದ್ದರಿಂದ, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತಮ್ಮ ಬೀಟ್ ವ್ಯಾಪ್ತಿಯ ಉಸ್ತುವಾರಿ ಪೊಲೀಸರನ್ನು ಗುರುತಿಸುವಂತಾಗಿದೆ. ಸದರಿ ಬೀಟ್‌ ಅಧಿಕಾರಿಗಳು ನಾಗರೀಕರು ಹಾಗು ಪೊಲೀಸ್‌ ಠಾಣೆಯ ನಡುವೆ ಸಂಪರ್ಕ ಬಿಂದುವಾಗಿ ಸೇವೆ ಸಲ್ಲಿಸುತ್ತಾರೆ.

 

ಸಮುದಾಯವನ್ನು ಪೊಲೀಸ್‌ರ ಸಂಪರ್ಕದೊಂದಿಗೆ ಸದಾ ಇರುವಂತೆ ನೋಡಿಕೊಳ್ಳುವುದು.

ಪ್ರತಿ ಬೀಟ್‌ಗಳಲ್ಲಿ “ಬೀಟ್‌ ನಾಗರೀಕರ ಕಮಿಟಿ ಸದಸ್ಯರು” ಎಂಬ ಸಮುದಾಯ ಕಮಿಟಿ ಇದ್ದು, ಇದರಲ್ಲಿ ಸುಮಾರು 30 ನಾಕರೀಕರು ಪ್ರತಿ ಬೀಟ್‌ನಲ್ಲಿ ಸದಸ್ಯರಾಗಿರುತ್ತಾರೆ. ಸದರಿ ಬೀಟ್‌ ಸದಸ್ಯರು ಅಯಾ ಬೀಟ್‌ನ ಒಳ ನಿವಾಸಿಗಳಾಗಿದ್ದು ಹಾಗು ಬೀಟ್‌ ಪೊಲೀಸಿನರವರೊಂದಿಗೆ ದಿನದ 24 ಗಂಟೆಯು ವಾಟ್ಸ್‌ ಅಪ್‌ ಗ್ರೂಪ್, ದೂರವಾಣಿಯಲ್ಲಿ ವಾಯಿಸ್‌, ಎಸ್‌ಎಂಎಸ್‌ ಮಾಹಿತಿ ಮುಖಾಂತರ ಸಂಪರ್ಕದಲ್ಲಿದ್ದುಕೊಂಡು ಬೇಕಾದ ಅತಿ ಉಪಯುಕ್ತ ತಳ ಮಟ್ಟದ ಮಾಹಿತಿಗಳನ್ನು ರವಾನಿಸುತ್ತಾರೆ.

 

ಪೊಲೀಸ್ಸಂಗ್‌ ಅನ್ನು ಹೆಚ್ಚು ಪರಿಣಾಮಕಾರಿಯಾ ಮಾಡುವುದು.

ಸಾರ್ವಜನಿಕರ ವ್ಯಾಪಕ ಭಾಗವಹಿಸುವಿಕೆಯಿಂದ ಪೊಲೀಸರಿಗೆ ಪೂರ್ವಭಾವಿಯಾಗಿ ಮೂಲ ಹಾಗೂ ತಳ ಮಟ್ಟದ ಗುಪ್ತಮಾಹಿತಿ / ಇತರೆ ಮಾಹಿತಿಯನ್ನು ಸಂಗ್ರಹಿಸಿ ಕಲೆ ಹಾಕಲು ಪರಿಣಾಮಕಾರಿಯಾಗಿದೆ.

 

ಪೊಲೀಸ್‌ ಸೇವೆಯನ್ನು ಹೆಚ್ಚು ಸುಲಭವಾಗಿ ತುಲುಪುವಂತೆ ಮಾಡುವುದು.

ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಪ್ರತಿಯೊಬ್ಬ ನಾಗರೀಕರಿಗೂ ತಮ್ಮ ಏರಿಯಾದಲ್ಲಿ ಒಬ್ಬ ಬೀಟ್‌ ಪೊಲೀಸ್ ಹೆಡ್‌ ಕಾನ್ಸ್ಟೇಬಲ್ / ಕಾನ್ಸ್ಟೇಬಲ್ ಸಂಪರ್ಕ ಬಿಂದುವಾಗಿ ಕಾರ್ಯನಿರ್ವಹಿಸುವುದರಿಂದ, ಅವರ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ವಿಚಾರವಾಗಿ ಅಥವಾ ಇತರೆ ತುರ್ತು ಸಂದರ್ಭದಲ್ಲಿ ಮಾಹಿತಿಯನ್ನು ಅತಿ ಶೀಘ್ರದಲ್ಲಿ ರವಾನಿಸಿ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.

ಇತ್ತೀಚಿನ ನವೀಕರಣ​ : 17-10-2020 05:55 PM ಅನುಮೋದಕರು: COMMISSIONERಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080